ತೋವಿನಕೆರೆ (ತುಮಕೂರು ಜಿಲ್ಲೆ): ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ವೀಳ್ಯದೆಲೆ ಬೆಲೆ ಏರಿಕೆಯಾಗಿದ್ದು, ನೂರರ ಗಡಿ ದಾಟಿದೆ. ಶುಕ್ರವಾರ ನಡೆದ ಸಂತೆಯಲ್ಲಿ ಒಂದು ಕಟ್ಟು (100 ಎಲೆ) ₹100ರಿಂದ ₹120ರ ವರೆಗೆ ಮಾರಾಟವಾಯಿತು.
ಮಧುಗಿರಿ, ಗುಬ್ಬಿ, ತುಮಕೂರು ತಾಲ್ಲೂಕು ಸೇರಿದಂತೆ ಆಂಧ್ರಪ್ರದೇಶದ ಹಿಂದೂಪುರ ಭಾಗದ ಜನರು ತೋವಿನಕೆರೆ ಸಂತೆಗೆ ಬಂದು, ವೀಳ್ಯದೆಲೆ ಖರೀದಿಸುತ್ತಾರೆ. ಈ ಭಾಗದಲ್ಲಿ ವೀಳ್ಯದೆಲೆ ಬೆಳೆಯುವ ಪ್ರಮಾಣ ಜಾಸ್ತಿಯಿದ್ದು, ಪ್ರತಿ ವಾರ ನಡೆಯುವ ಸಂತೆಗೆ ತಂದು ರೈತರು ಮಾರಾಟ ಮಾಡುತ್ತಾರೆ.
ಇತ್ತೀಚೆಗೆ ಇಬ್ಬನಿ ಬೀಳುವುದು ಹೆಚ್ಚಾಗಿದ್ದು, ಮೈ ಕೊರೆಯುವ ಚಳಿ ವೀಳ್ಯದೆಲೆ ಬೆಳೆ ಮೇಲೂ ಪರಿಣಾಮ ಬೀರಿದೆ.
ಚಳಿಗಾಲದಲ್ಲಿ ಇದರ ಬೆಳವಣಿಗೆ ಕುಂಠಿತವಾಗಲಿದೆ. ಸಂತೆ, ಮಾರುಕಟ್ಟೆಗಳಲ್ಲಿ ಆವಕ ಕಡಿಮೆಯಾಗಿರು ವುದೇ ವೀಳ್ಯದೆಲೆ ದರ ಏರಿಕೆಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.