ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಭಾರತ್ ಬ್ರ್ಯಾಂಡ್ ಹೆಸರಿನಲ್ಲಿ ಚಿಲ್ಲರೆ ದರದಡಿ ಮಾರಾಟ ಮಾಡುತ್ತಿರುವ ಕಡಲೆ ಬೇಳೆಗೆ ಉತ್ತಮ ಬೇಡಿಕೆಯಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
ಪ್ರತಿ ತಿಂಗಳು ದೇಶದಲ್ಲಿ 1.8 ಲಕ್ಷ ಟನ್‌ನಷ್ಟು (ಎಲ್ಲಾ ಬ್ರ್ಯಾಂಡ್‌ಗಳು ಸೇರಿ) ಕಡಲೆ ಬೇಳೆ ಬಳಕೆಯಾಗುತ್ತಿದೆ. ಇದರಲ್ಲಿ ಕಾಲು ಭಾಗದಷ್ಟು ಸರಕು ಭಾರತ್ ಬ್ರ್ಯಾಂಡ್‌ನದ್ದಾಗಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕಡಲೆ ಬೇಳೆ ಮಾರಾಟ ಆರಂಭಿಸಲಾಗಿತ್ತು. ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಸದ್ಯ ಭಾರತ್ ಬ್ಯ್ರಾಂಡ್‌ನ ಒಂದು ಕೆ.ಜಿ ಕಡಲೆ ಬೇಳೆಗೆ ₹60 ದರ ಇದೆ. ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿಗೆ ₹80 ದರ ಇದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್‌ನಿಂದ ಇಲ್ಲಿಯವರೆಗೆ 2.28 ಲಕ್ಷ ಟನ್‌ನಷ್ಟು ಕಡಲೆ ಬೇಳೆ ಮಾರಾಟವಾಗಿದೆ. ತಿಂಗಳವಾರು ಸರಾಸರಿ ₹45 ಸಾವಿರ ಟನ್‌ನಷ್ಟಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.