ನವದೆಹಲಿ: ಫಿನ್‌ಟೆಕ್ ಕಂಪನಿಯಾದ ಭಾರತ್‌ಪೇ ಪ್ರಸಕ್ತ ಹಣಕಾಸು ವರ್ಷದಲ್ಲಿ ₹904 ಕೋಟಿ ವರಮಾನ ಗಳಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ 182ರಷ್ಟು ವೃದ್ಧಿಯಾಗಿದೆ ಎಂದು ಕಂಪನಿ ಹೇಳಿದೆ.
ಇದೇ ಅವಧಿಯಲ್ಲಿ ಕಂಪನಿಯ ನಷ್ಟವು ₹5,594 ಕೋಟಿಯಿಂದ ₹886 ಕೋಟಿಗೆ ಇಳಿದಿದೆ. ವ್ಯಾಪಾರಿಗಳಿಗೆ ಸಾಲ ನೀಡುವಿಕೆ ವಿಭಾಗದ ಬೆಳವಣಿಗೆಯು ಗಮನಾರ್ಹವಾಗಿದೆ. ವ್ಯಾಪಾರಿಗಳ ಸಬಲೀಕರಣಕ್ಕೆ ಆದ್ಯತೆ ನೀಡಿದ್ದು, ಸಾಲ ನೀಡಿಕೆಯಲ್ಲಿ ಶೇ 129ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದೆ.
ವ್ಯಾಪಾರಿ ಕೇಂದ್ರಿತ ಸೇವೆ ಮತ್ತು ಉತ್ಪನ್ನಗಳಿಗೆ ಚಾಲನೆ ನೀಡುವ ಜತೆಗೆ ಸುಸ್ಥಿರ ಲಾಭದತ್ತ ಗಮನ ಕೇಂದ್ರೀಕರಿಸಲಾಗಿದೆ. 2022ರ ಹಣಕಾಸು ವರ್ಷದಲ್ಲಿ ₹321 ಕೋಟಿ ಲಾಭಗಳಿಸಲಾಗಿತ್ತು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.