ಬೆಂಗಳೂರು: ದೇಶದ ಪ್ರಮುಖ ದೂರಸಂಪರ್ಕ ಕಂಪನಿಯಾದ ಭಾರ್ತಿ ಏರ್‌ಟೆಲ್, ಮೈಸೂರು ಸೇರಿದಂತೆ ದೇಶದಾದ್ಯಂತ ತನ್ನ ಕಚೇರಿಗಳಲ್ಲಿ ಗ್ರಾಹಕರ ದಿನ ಆಚರಿಸಿತು.
ಏರ್‌ಟೆಲ್ ಕಚೇರಿಗಳಲ್ಲಿರುವ ಹಿರಿಯ ಅಧಿಕಾರಿಗಳಿಂದ ಹಿಡಿದು ಕಿರಿಯ ಸಿಬ್ಬಂದಿಯು ತಮ್ಮ ದೈನಂದಿನ ಕಚೇರಿ ಕೆಲಸ ಬದಿಗೊತ್ತಿ ಮಂಚೂಣಿ ಕೆಲಸಗಾರರೊಂದಿಗೆ ಕೈಜೋಡಿಸಿದರು. ಗ್ರಾಹಕರೊಂದಿಗೆ ನೇರವಾಗಿ ಮಾತುಕತೆ ನಡೆಸಿದರು. ಈ ಮೂಲಕ ಸಿಬ್ಬಂದಿ ಮತ್ತು ಗ್ರಾಹಕರ ಪ್ರತಿಕ್ರಿಯೆ ಮತ್ತು ಅವರ ಬೇಡಿಕೆಗಳ ಬಗ್ಗೆ ತಿಳಿದುಕೊಂಡರು.
ಗ್ರಾಹಕರ ದಿನಾಚರಣೆಯು ಉದ್ಯೋಗಿಗಳಿಗೆ ಹೊಸ ದೃಷ್ಟಿ ನೀಡುತ್ತದೆ. ಗ್ರಾಹಕರ ನೇರ ಸಂಪರ್ಕದ ಮೂಲಕ ಅವರ ಸಮಸ್ಯೆಗಳು, ಸಲಹೆ, ದೃಷ್ಟಿಕೋನ ಮತ್ತು ಇಷ್ಟಗಳನ್ನು ಅರ್ಥಮಾಡಿಕೊಳ್ಳಬಹುದು. ಆ ಮೂಲಕ ಅವರೊಂದಿಗೆ ಆಳವಾದ ಸಂಬಂಧ ಹೊಂದುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು ಏರ್‌ಟೆಲ್ ತಿಳಿಸಿದೆ.
ದೇಶದಲ್ಲಿ ಕೇಂದ್ರ ಕಚೇರಿ ಹೊಂದಿರುವ ಏರ್‌ಟೆಲ್ 17 ರಾಷ್ಟ್ರಗಳಲ್ಲಿ 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.