ADVERTISEMENT

ಅಮೆರಿಕ| ಇ–ಕಾಮರ್ಸ್‌ ತಾಣದಲ್ಲಿ ಚೀನಾ ಉತ್ಪನ್ನದ ಬಗ್ಗೆ ತಿಳಿಸುವಂತೆ ಮಸೂದೆ ಮಂಡನೆ

ಪಿಟಿಐ
Published 30 ಜುಲೈ 2020, 7:40 IST
Last Updated 30 ಜುಲೈ 2020, 7:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಇ–ಕಾಮರ್ಸ್‌ ತಾಣಗಳ ಮೂಲಕ ಮಾರಾಟ ಮಾಡುವ ಚೀನಾ ಉತ್ಪನ್ನದ ಬಗ್ಗೆ ‌‌ಗ್ರಾಹಕರಿಗೆ ತಿಳಿಯುವಂತೆ ಉತ್ಪಾದಕ ರಾಷ್ಟ್ರದ ಹೆಸರನ್ನು ಪ್ರದರ್ಶಿಸಬೇಕು ಎಂಬ ಮಸೂದೆಯನ್ನು ಅಮೆರಿಕದ ಸಂಸತ್ತಿನಲ್ಲಿ ಬುಧವಾರ ಮಂಡಿಸಲಾಗಿದೆ.

‘ಒಂದು ಉತ್ಪನದ ಬಹುದೊಡ್ಡ ಭಾಗ ಚೀನಾದಲ್ಲಿ ತಯಾರಾಗಿದ್ದಲ್ಲಿ ಈ ಬಗ್ಗೆ ಇ–ಕಾಮರ್ಸ್‌ ತಾಣಗಳಲ್ಲಿ ಪ್ರದರ್ಶಿಸಬೇಕು. ಅಲ್ಲದೆ ಚೀನಾದಿಂದ ತಯಾರಿಸಲ್ಪಟ್ಟ ಉತ್ಪನ್ನ ಮತ್ತು ಅಲ್ಲಿ ಜೋಡಿಸಲ್ಪಟ್ಟ ಉತ್ಪನ್ನದ ಭಾಗಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ.

‘ವಿಶ್ವಕ್ಕೆ ಚೀನಾದಿಂದಾಗಿ ಕೊರೊನಾ ಸೋಂಕು ಹರಡಿದೆ. ಹೀಗಾಗಿ, ಆನ್‌ಲೈನ್‌ ಮೂಲಕ ಖರೀದಿಸುವ ಉತ್ಪನ್ನಗಳು ಚೀನಾದಲ್ಲಿ ಉತ್ಪಾದಿಸಲಾಗಿವೆಯೇ ಎಂಬುದರ ಬಗ್ಗೆಅಮೆರಿಕದ ಗ್ರಾಹಕರು ತಿಳಿಯಬೇಕು’ ಎಂದು ಸಂಸದ ಮಾರ್ಥಾ ಮ್ಯಾಕ್‌ಸಲ್ಲಿ ತಿಳಿಸಿದರು.

ADVERTISEMENT

ಇ–ಕಾಮರ್ಸ್‌ ತಾಣಗಳಲ್ಲಿ ಉತ್ಪಾದಕ ರಾಷ್ಟ್ರದ ಹೆಸರನ್ನು ಬಹಿರಂಗಪಡಿಸುವ ಸಲುವಾಗಿ ಸುಂಕ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವಂತೆಯೂ ಮಸೂದೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.