ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ತಿನಿಸು ಮತ್ತು ಪಾನೀಯ ಕಂಪನಿ, ಪುತ್ತೂರು ಮೂಲದ ಎಸ್.ಜಿ. ಕಾರ್ಪೊರೇಟ್ಸ್ (ಬಿಂದು) ಮೂರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಅವರು ಸ್ನ್ಯಾಕ್ ಅಪ್ ಮಸಾಲಾ ಮೂಂಗ್ ದಾಲ್, ಸ್ನ್ಯಾಕ್ ಅಪ್ ಚಾಕೊಲೇಟ್ ಕೋನ್, ಸ್ನ್ಯಾಕ್ ಅಪ್ ಪಾಸ್ತಾ ಫಿಂಗರ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಎಸ್.ಜಿ. ಕಾರ್ಪೊರೇಟ್ಸ್ ಸಂಸ್ಥೆಯ ಎಂ.ಡಿ. ಸತ್ಯಶಂಕರ್ ಭಟ್ ಮಾತನಾಡಿ, ‘2026ರೊಳಗೆ ಸ್ನ್ಯಾಕ್ ಅಪ್ ವಿಭಾಗದಲ್ಲಿ ₹100 ಕೋಟಿ ವ್ಯವಹಾರದ ಗುರಿ ಹೊಂದಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.