ಬೆಂಗಳೂರು: ಇನ್ಸುಲಿನ್ ಬ್ರ್ಯಾಂಡ್ ಆಗಿರುವ ಇನ್ಸುಜೆನ್ ಪೂರೈಕೆ ಮಾಡಲು ತನ್ನ ಅಂಗಸ್ಥೆಯು ಮಲೇಷ್ಯಾ ಸರ್ಕಾರದ ಜೊತೆ ಮೂರು ವರ್ಷಗಳ ಅವಧಿಯ, ₹ 688 ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ ಎಂದು ಬಯೋಕಾನ್ ಬಯೋಲಾಜಿಕ್ಸ್ ತಿಳಿಸಿದೆ.
‘ಈ ಒಪ್ಪಂದದ ಕಾರಣದಿಂದಾಗಿ ನಮಗೆ ಮಧುಮೇಹ ಇರುವ ನಾಲ್ಕು ಲಕ್ಷಕ್ಕೂ ಹೆಚ್ಚಿನ ಜನರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತದೆ’ ಎಂದು ಬಯೋಕಾನ್ ಬಯೊಲಾಜಿಕ್ಸ್ ಮುಖ್ಯ ವಾಣಿಜ್ಯ ಅಧಿಕಾರಿ ಸುಶೀಲ್ ಉಮೇಶ್ ಹೇಳಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.