ನವದೆಹಲಿ: ಜೈವಿಕ ತಂತ್ರಜ್ಞಾನ ವಲಯದ ಪ್ರಮುಖ ಕಂಪನಿಯಾದ ಬಯೋಕಾನ್‌ನ ಜೂನ್ ತ್ರೈಮಾಸಿಕದ ಲಾಭದಲ್ಲಿ ಶೇಕಡ 35.39ರಷ್ಟು ಇಳಿಕೆ ಆಗಿದೆ. ಕಂಪನಿಯು ಈ ತ್ರೈಮಾಸಿಕದಲ್ಲಿ ₹ 108.4 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ₹ 167.8 ಕೋಟಿ ಲಾಭ ಗಳಿಸಿತ್ತು.
ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ಲಾಭದ ಪ್ರಮಾಣ ಕಡಿಮೆ ಆಗಿರಲು ಮುಖ್ಯ ಕಾರಣ, ಬಯೋಕಾನ್ ಜೊತೆ ನಂಟು ಹೊಂದಿರುವ ಬಿಕಾರಾ ಥೆರಪೆಟಿಕ್ಸ್ ನವೋದ್ಯಮದಲ್ಲಿ ಆಗಿರುವ ನಷ್ಟ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.