ನವದೆಹಲಿ: ಐಎಸ್‌ಐ ಗುರುತು ಇರುವ ಆಟಿಕೆಗಳನ್ನೇ ಖರೀದಿಸಬೇಕು ಎಂದು ಭಾರತೀಯ ಮಾನದಂಡ ಮಂಡಳಿಯು (ಬಿಐಎಸ್) ಗ್ರಾಹಕರಿಗೆ ಮನವಿ ಮಾಡಿದೆ.
ಐಎಸ್‌ಐ ಗುರುತು ಇರುವ ಆಟಿಕೆಗಳಿಗೆ ಗುಣಮಟ್ಟದ ಪ್ರಮಾಣೀಕರಣವು ಕಡ್ಡಾಯ ಆಗಿರುವುದರಿಂದ ಇಂತಹ ಉತ್ಪನ್ನಗಳನ್ನೇ ಖರೀದಿಸುವಂತೆ ಹೇಳಿದೆ.
ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ಕಂಡರೆ ದೂರು ನೀಡುವಂತೆ ಗ್ರಾಹಕರಿಗೆ ತಿಳಿಸಿದೆ. ಬಿಐಎಸ್ ಕೇರ್ ಆ್ಯಪ್ ಮೂಲಕ ಅಥವಾ complaints@bis.gov.inಗೆ ದೂರು ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಟಿಕೆಗಳಲ್ಲಿ ಗುಣಮಟ್ಟದ ಪ್ರಮಾಣೀಕರಣ ಇರುವುದನ್ನು 2021ರ ಜನವರಿಯಿಂದ ಕಡ್ಡಾಯಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.