ADVERTISEMENT

ಮೊದಲ ತ್ರೈಮಾಸಿಕದಲ್ಲಿ ಬ್ರಿಟಾನಿಯಾದ ಲಾಭ ಶೇ 36 ಹೆಚ್ಚಳ: ₹458 ಕೋಟಿ ಲಾಭ

ರಾಯಿಟರ್ಸ್
Published 5 ಆಗಸ್ಟ್ 2023, 6:10 IST
Last Updated 5 ಆಗಸ್ಟ್ 2023, 6:10 IST
   

ಬೆಂಗಳೂರು: ಮಾರಿ ಗೋಲ್ಡ್ ಸಹಿತ ದೇಶದ ಖ್ಯಾತ ಬಿಸ್ಕತ್ತು ತಯಾರಕ ಕಂಪನಿ ಬ್ರಿಟಾನಿಯಾದ ತ್ರೈಮಾಸಿಕ ಲಾಭ ಶೇ 36ರಷ್ಟು ಏರಿಕೆಯಾಗಿದೆ.

ಪ್ಯಾಕ್‌ ಮಾಡಿದ ಆಹಾರ ಪೊಟ್ಟಣಗಳಿಗೆ ಬೇಡಿಕೆ ಹೆಚ್ಚಳ, ಬ್ರಿಟಾನಿಯಾಗೆ ಗುಣಾತ್ಮಕವಾಗಿ ಪರಿಣಮಿಸಿದೆ.

ಜೂನ್‌ಗೆ ಅಂತ್ಯವಾದ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ರಿಟಾನಿಯಾ ₹458 ಕೋಟಿ ಲಾಭಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹337 ಕೋಟಿ ಲಾಭದಲ್ಲಿತ್ತು.

ADVERTISEMENT

ಗ್ರಾಮೀಣ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಬ್ರಿಟಾನಿಯಾ ಹೆಚ್ಚಿನ ಡೀಲರ್‌ಗಳ ಜತೆ ಒಪ್ಪಂದ ಮಾಡಿಕೊಂಡಿದ್ದು ಹಾಗೂ ಗ್ರಾಹಕರನ್ನು ಸೆಳೆಯಲು ಜಾಹೀರಾತುಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೂ ಕೂಡ ಲಾಭ ಹೆಚ್ಚಳಕ್ಕೆ ಕಾರಣವಾಗಿದೆ.

ಬ್ರಿಟಾನಿಯಾದ ಈ ಪ್ರಯತ್ನದಿಂದ ಕಾರ್ಯಾಚರಣೆ ಆದಾಯ (Operational revenue) ಕೂಡ ಶೇ 8ರಷ್ಟು ಏರಿಕೆಯಾಗಿ ₹4 ಸಾವಿರ ಕೋಟಿಗೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.