ಲಂಡನ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಬೆನ್ನಲ್ಲೇ ಬಿಟ್‌ಕಾಯಿನ್ ಮೌಲ್ಯವು ಭಾನುವಾರದ ವಹಿವಾಟಿನಲ್ಲಿ ಭಾರಿ ಏರಿಕೆಯಾಗಿದ್ದು, ಮೊದಲ ಬಾರಿಗೆ 80 ಸಾವಿರ ಅಮೆರಿಕನ್ ಡಾಲರ್‌ಗೆ (₹67.50 ಲಕ್ಷ) ತಲುಪಿದೆ.
ಜಾಗತಿಕ ಮಟ್ಟದಲ್ಲಿ ಅಮೆರಿಕವನ್ನು ಕ್ರಿಪ್ಟೊಕರೆನ್ಸಿಗಳ ರಾಜಧಾನಿಯನ್ನಾಗಿ ಮಾಡುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದಕ್ಕಾಗಿ ವರ್ಲ್ಡ್ ಲಿಬರ್ಟಿ ಫೈನಾನ್ಶಿಯಲ್ ಹೆಸರಿನ ಡಿಜಿಟಲ್ ಕರೆನ್ಸಿ ವೇದಿಕೆಯನ್ನೂ ಆರಂಭಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಕ್ರಿಪ್ಟೊಕರೆನ್ಸಿ ಸ್ನೇಹಿ ನೀತಿ ಜಾರಿಗೊಳಿಸುವುದಾಗಿ ಅವಟು ಪ್ರಕಟಿಸಿದ್ದರು. ಅಲ್ಲದೆ, ರೆಸ್ಟೊರೆಂಟ್‌ವೊಂದರಲ್ಲಿ ಬಿಟ್‌ಕಾಯಿನ್ ನೀಡಿ ಬರ್ಗರ್ ಖರೀದಿಸಿದ್ದರು. ಟ್ರಂಪ್ ಗೆಲುವು ಸಾಧಿಸಿರುವುದರಿಂದ ಹೂಡಿಕೆದಾರರು ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಇದರಿಂದ ಮೌಲ್ಯವು ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.