ಬೆಂಗಳೂರು: ಸ್ಮಾರ್ಟ್ ಸಾಧನಗಳನ್ನು ತಯಾರಿಸುವ ಬೌಲ್ಟ್ ಕಂಪನಿಯು ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಮಲ್ಟಿ ಬ್ರ್ಯಾಂಡ್ ಮಳಿಗೆಗಳ ಮೂಲಕ ಆಫ್‌ಲೈನ್ ವಹಿವಾಟು ಆರಂಭಿಸುವುದಾಗಿ ಹೇಳಿದೆ.
ಸದ್ಯ ಕಂಪನಿಯ ಜಾಲತಾಣ ಮತ್ತು ಇ–ಕಾಮರ್ಸ್‌ನಲ್ಲಿ ಮಾತ್ರವೇ ಬೌಲ್ಟ್ ಉತ್ಪನ್ನಗಳು ಖರೀದಿಗೆ ಲಭ್ಯವಿವೆ. 31 ರಾಜ್ಯಗಳಲ್ಲಿ 2,500ಕ್ಕೂ ಅಧಿಕ ಮಳಿಗೆಗಳ ಮೂಲಕ ಬೌಲ್ಟ್ ಆಡಿಯೊ ಮತ್ತು ಧರಿಸಬಲ್ಲ ಸಾಧನಗಳನ್ನು ಮಾರಾಟ ಮಾಡುವ ಸಿದ್ಧತೆ ನಡೆಸಲಾಗುತ್ತಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.