ADVERTISEMENT

ಅಕ್ಟೋಬರ್‌ ನಂತರ ಎಲ್‌ಐಸಿ ಐಪಿಒ

ಪಿಟಿಐ
Published 2 ಫೆಬ್ರುವರಿ 2021, 16:21 IST
Last Updated 2 ಫೆಬ್ರುವರಿ 2021, 16:21 IST
ಭಾರತೀಯ ಜೀವವಿಮಾ ನಿಗಮ
ಭಾರತೀಯ ಜೀವವಿಮಾ ನಿಗಮ   

ನವದೆಹಲಿ: ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಪ್ರಕ್ರಿಯೆಯು (ಐಪಿಒ) ಅಕ್ಟೋಬರ್‌ ನಂತರ ಆಗಬಹುದು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ (ಡಿಐಪಿಎಎಂ) ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಎಲ್‌ಐಸಿ ಹಾಗೂ ಐಡಿಬಿಐ ಬ್ಯಾಂಕ್‌ನ ಷೇರುಗಳ ಮಾರಾಟಕ್ಕೆ ಅಗತ್ಯವಿರುವ ಕಾನೂನು ತಿದ್ದುಪಡಿ ಮಸೂದೆಯನ್ನು ಸರ್ಕಾರವು ಸಂಸತ್ತಿನಲ್ಲಿ ಬಜೆಟ್ ಜೊತೆಯಲ್ಲೇ ಮಂಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT