ADVERTISEMENT

ಬಿಪಿಸಿಎಲ್‌: ಪ್ರತಿ ಷೇರಿಗೆ ₹ 58 ಲಾಭಾಂಶ

ಪಿಟಿಐ
Published 26 ಮೇ 2021, 22:25 IST
Last Updated 26 ಮೇ 2021, 22:25 IST

ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್‌) ಕಂಪನಿಯು ಒಟ್ಟು ₹ 12,581 ಕೋಟಿಯನ್ನು ಲಾಭಾಂಶದ ರೂಪದಲ್ಲಿ ಷೇರುದಾರರಿಗೆ ನೀಡುವುದಾಗಿ ಬುಧವಾರ ಪ್ರಕಟಿಸಿದೆ. ಈ ಮೊತ್ತದಲ್ಲಿ ಶೇಕಡ 50ಕ್ಕಿಂತ ಹೆಚ್ಚಿನ ಪಾಲು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೋಗಲಿದೆ.

‘ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ, ಪ್ರತಿ ಷೇರಿಗೆ ₹ 58ರಷ್ಟು ಲಾಭಾಂಶ ನೀಡಲು ಕಂಪನಿಯ ಆಡಳಿತ ಮಂಡಳಿಯು ಶಿಫಾರಸು ಮಾಡಿದೆ. ಇದರಲ್ಲಿ ಪ್ರತಿ ಷೇರಿಗೆ ಒಂದು ಬಾರಿಯ ವಿಶೇಷ ಲಾಭಾಂಶವಾದ ₹ 35 ಕೂಡ ಸೇರಿದೆ’ ಎಂದು ಬಿಪಿಸಿಎಲ್‌ ಷೇರುಪೇಟೆಗೆ ತಿಳಿಸಿದೆ.

ಬಿಪಿಸಿಎಲ್‌ನಲ್ಲಿ ಕೇಂದ್ರವು ಶೇಕಡ 52.98ರಷ್ಟು ಷೇರು ಹೊಂದಿದೆ. ಪ್ರತಿ ಷೇರಿಗೆ ₹ 21ರಷ್ಟು ಮಧ್ಯಂತರ ಲಾಭಾಂಶವನ್ನು ಕಂಪನಿಯು ಈ ಹಿಂದೆ ಘೋಷಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.