ನವದೆಹಲಿ: ತೈಲಯೇತರ ವಹಿವಾಟುಗಳ ಬೆಳವಣಿಗೆಗಾಗಿ ಮುಂದಿನ ಐದು ವರ್ಷಗಳಲ್ಲಿ ₹1.4 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಸೋಮವಾರ ತಿಳಿಸಿದೆ.
ಪೆಟ್ರೊಕೆಮಿಕಲ್ಸ್, ನೈಸರ್ಗಿಕ ಅನಿಲ ಮತ್ತು ಶುದ್ಧ ಇಂಧನ ವಹಿವಾಟಿನ ಬೆಳವಣಿಗೆಗಾಗಿ ಇಷ್ಟು ಮೊತ್ತದ ಹೂಡಿಕೆ ಮಾಡಲು ಉದ್ದೇಶಿಸಿರುವುದಾಗಿ ಅದು ಹೇಳಿದೆ.
‘ತೈಲ ಸಂಸ್ಕರಣೆ ಮತ್ತು ಇಂಧನ ಮಾರುಕಟ್ಟೆಯಲ್ಲಿ ದೇಶದ ಎರಡನೇ ಅತಿದೊಡ್ಡ ಕಂಪನಿ ಆಗಿರುವ ಬಿಪಿಸಿಎಲ್, ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ತನ್ನ ಕಾರ್ಯತಂತ್ರಗಳನ್ನು ಮರುಪರಿಶೀಲನೆಗೆ ಒಳಪಡಿಸುತ್ತಿದೆ’ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಸಿಂಗ್ ಅವರು ಈಚಿನ ವಾರ್ಷಿಕ ವರದಿಯಲ್ಲಿ ಹೇಳಿದ್ದಾರೆ.
‘ಭವಿಷ್ಯದಲ್ಲಿ ತೈಲ ವಹಿವಾಟಿನಲ್ಲಿ ಆಗಬಹುದಾದ ಸಂಭವನೀಯ ಇಳಿಕೆಯಿಂದ ರಕ್ಷಣೆ ಪಡೆಯಲು ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಲು ಕಂಪನಿಯು ಪರ್ಯಾಯ ವಹಿವಾಟನ್ನು ವಿಸ್ತರಿಸಲು ಯೋಜನೆ ರೂಪಿಸುತ್ತಿದೆ.
‘ಮಧ್ಯಪ್ರದೇಶದ ಬೀನಾ ಮತ್ತು ಕೇರಳದ ಕೊಚ್ಚಿಯಲ್ಲಿ ಇರುವ ತೈಲ ಸಂಸ್ಕರಣಾಗಾರಗಳಲ್ಲಿ ಪೆಟ್ರೊಕೆಮಿಕಲ್ ತಯಾರಿಕಾ ಘಟಕ ಸ್ಥಾಪಿಸಲಾಗುವುದು. ನೈಸರ್ಗಿಕ ಅನಿಲ ವಹಿವಾಟಿನ ಅಭಿವೃದ್ಧಿಗಾಗಿ ನಗರ ಪ್ರದೇಶಗಳಲ್ಲಿ ಅನಿಲದ ರಿಟೇಲ್ ಮಾರಾಟದ ಪರವಾನಗಿ ಪಡೆಯಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಂಕಿ–ಅಂಶ
83,685
ದೇಶದಲ್ಲಿ ಇರುವ ಒಟ್ಟು ಪೆಟ್ರೋಲ್ ಬಂಕ್‌ಗಳ ಸಂಖ್ಯೆ
20,217
ಭಾರತ್ ಪೆಟ್ರೋಲಿಯಂ ಹೊಂದಿರುವ ಪೆಟ್ರೋಲ್ ಬಂಕ್‌ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.