ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಸಂಸ್ಥೆ ಬ್ರಿಗೇಡ್ ಎಂಟರ್‌ಪ್ರೈಸಸ್ ಬೆಂಗಳೂರು, ಚೆನ್ನೈ ಮತ್ತು ಮೈಸೂರು ನಗರಗಳಲ್ಲಿನ ತನ್ನ ವಸತಿ ಯೋಜನೆಗಳಿಗೆ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯಕ್ಕೆ ಚಾಲನೆ ನೀಡಿದೆ.
ಗ್ರಾಹಕರು ತಮ್ಮ ಅಪಾರ್ಟ್‌ಮೆಂಟ್ ಖರೀದಿ ಒಪ್ಪಂದಗಳಿಗೆ ಡಿಜಿಟಲ್ ಸಹಿ ಹಾಕಲು ಅನುವು ಮಾಡಿಕೊಟ್ಟಿದೆ. ’ಆಸಕ್ತ ಖರೀದಿದಾರರು ಪ್ರಾಪರ್ಟಿಯ ವರ್ಚುವಲ್ ಟೂರ್ ಮತ್ತುವಿಡಿಯೊ ಕಾನ್‌ಫೆರೆನ್ಸ್ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು’ ಎಂದು ಬ್ರಿಗೇಡ್ ರೆಸಿಡೆನ್ಶಿಯಲ್ ಸಿಇಓ ರಾಜೇಂದ್ರ ಜೋಷಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.