ADVERTISEMENT

ಎರಡು ವಿಶೇಷ ಪ್ರಿಪೇಯ್ಡ್ ವೋಚರ್ ಪರಿಚಯಿಸಿದ ಬಿಎಸ್‌ಎನ್‌ಎಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜುಲೈ 2021, 11:51 IST
Last Updated 5 ಜುಲೈ 2021, 11:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವಾದಾರ ಸಂಸ್ಥೆ ಬಿಎಸ್‌ಎನ್‌ಎಲ್, ಪ್ರಿಪೇಯ್ಡ್ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಿದೆ.

‘ಟೆಲಿಕಾಂ ಟಾಕ್’ ಈ ಕುರಿತು ವಿವರ ಪ್ರಕಟಿಸಿದ್ದು, ಎರಡು ಹೊಸ ಯೋಜನೆಗಳ ಜತೆಗೇ, ಈ ಮೊದಲು ಬಿಡುಗಡೆ ಮಾಡಿದ್ದ ₹699 ಪ್ಲ್ಯಾನ್ ಅನ್ನು ಕೂಡ ಮುಂದುವರಿಸಿದೆ ಎಂದಿದೆ.

ಏ. 1ರಂದು ಪರಿಚಯಿಸಲಾಗಿದ್ದ ₹699 ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಳ್ಳುವ ಪ್ರಿಪೇಯ್ಡ್ ಗ್ರಾಹಕರಿಗೆ, 180 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ, ಎಸ್ಎಂಎಸ್ ಮತ್ತು 0.5 GB ಪ್ರತಿದಿನ ಡೇಟಾ ದೊರೆಯಲಿದೆ.

ADVERTISEMENT

ಉಳಿದಂತೆ ₹75 ಮತ್ತು ₹94 ಬೆಲೆಯ ಎರಡು ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಲಾಗಿದೆ.

₹75 ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 2 GB ಒಟ್ಟು ಡೇಟಾ, 60 ದಿನಗಳ ಅವಧಿಗೆ 100 ನಿಮಿಷಗಳ ಕರೆ ಸೌಲಭ್ಯ ದೊರೆಯಲಿದೆ.

₹95 ಪ್ಲ್ಯಾನ್‌ನಲ್ಲಿ, ಒಟ್ಟು 3 GB ಡೇಟಾ, 100 ನಿಮಿಷಗಳ ಕರೆ ಮತ್ತು 90 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.