ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ (ಬಿಎಸ್‌ಎನ್‌ಎಲ್) ಒಟ್ಟು ನಷ್ಟವು 2020–21ರಲ್ಲಿ ₹ 7,441 ಕೋಟಿಗೆ ಇಳಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್ ಕಂಪನಿಯು 2019–20ರಲ್ಲಿ ಒಟ್ಟು ₹ 15,499 ಕೋಟಿ ನಷ್ಟ ಅನುಭವಿಸಿತ್ತು. ‘ಕಂಪನಿಯ 78,569 ನೌಕರರು ಸ್ವಯಂ ನಿವೃತ್ತಿ (ವಿಆರ್‌ಎಸ್) ಪಡೆದಿದ್ದಾರೆ. ಇದರ ಪರಿಣಾಮವಾಗಿ ನೌಕರರ ವೇತನಕ್ಕಾಗಿ ವೆಚ್ಚ ಮಾಡುವ ಮೊತ್ತ ಕಡಿಮೆಯಾಗಿದೆ. ನಷ್ಟ ಕಡಿಮೆ ಆಗಲು ಇದು ಪ್ರಮುಖ ಕಾರಣ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.