ನವದೆಹಲಿ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಬೈಜುಸ್ ಕಂಪನಿಯು ತನ್ನ ಮಾರಾಟ ಹಾಗೂ ಟ್ಯೂಷನ್ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 500 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
ಕಳೆದ 20 ದಿನಗಳ ಹಿಂದೆಯೇ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಹಳಿ ತಪ್ಪಿರುವ ಕಂಪನಿಯ ವಹಿವಾಟನ್ನು ಸರಿದಾರಿಗೆ ತರಲು ಈ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಉದ್ಯೋಗ ಕಡಿತವು ಮಾರಾಟ ವಿಭಾಗದ ಸಿಬ್ಬಂದಿ, ಶಿಕ್ಷಕರು ಹಾಗೂ ಟ್ಯೂಷನ್ ಕೇಂದ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
‘ಕಂಪನಿಯ ವ್ಯವಹಾರವನ್ನು ಸರಿಪಡಿಸುವ ಬಗ್ಗೆ 2023ರ ಅಕ್ಟೋಬರ್‌ನಲ್ಲಿಯೇ ಘೋಷಿಸಲಾಗಿತ್ತು. ಸದ್ಯ ಕಂಪನಿಯ ಕಾರ್ಯಾಚರಣೆಯನ್ನು ಸರಳೀಕರಿಸುತ್ತಿದ್ದೇವೆ. ವೆಚ್ಚ ಕಡಿತದ ಮೂಲಕ ಆಡಳಿತ ಮಂಡಳಿಗೆ ಹಣಕಾಸಿನ ಹರಿವು ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಬೈಜುಸ್ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.