ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆಯು ತೆರಿಗೆದಾರರ ನೋಂದಣಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಪ್ಯಾನ್ 2.0 (PAN 2.0) ಯೋಜನೆಗೆ ಅನುಮೋದನೆ ನೀಡಿದೆ.
ಪ್ಯಾನ್ 2.0 ಈಗಿರುವ ಪ್ಯಾನ್ ಕಾರ್ಡ್‌ನ ಅಡ್ವಾನ್ಸ್ಡ್ ವರ್ಶನ್ ಆಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ತೆರಿಗೆದಾರರ ಸೇವೆಗಳನ್ನು ಸುಧಾರಿಸಲು ಮತ್ತು ಸುಲಲಿತ ವ್ಯಾಪಾರ ವಹಿವಾಟಿನ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಗೆ ಸರ್ಕಾರ ₹1,435 ಕೋಟಿ ವ್ಯಯಿಸುತ್ತಿದೆ.
ಪ್ಯಾನ್ 2.0ನ ಲಕ್ಷಣಗಳೆಂದರೆ
ಹಣಕಾಸಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಲ್ಲಿ ಪ್ಯಾನ್ ಕಾರ್ಡ್ ಅತಿ ಅಗತ್ಯವಾಗಿರುವುದರಿಂದ ಭದ್ರತೆ ಮುಖ್ಯವಾಗಿರುತ್ತದೆ. ಈ ದೃಷ್ಟಿಯಿಂದ ಪ್ಯಾನ್ 2.0 ವ್ಯವಸ್ಥೆಯಲ್ಲಿ ಕ್ಯೂಆರ್ ಕೋಡ್ ಸಹಿತ ಕಾರ್ಡ್‌ಗಳು ಲಭ್ಯವಾಗಲಿದೆ.
ಸರ್ಕಾರದ ಡಿಜಿಟಲ್ ವ್ಯವಸ್ಥೆ ಎಲ್ಲೆಲ್ಲಿ ಅಗತ್ಯವೋ ಅಲ್ಲೆಲ್ಲಾ ಕಡೆ ಈ ಕಾರ್ಡ್ ಬಳಕೆಯಾಗಲಿದೆ. ಜತೆಗೆ ಸಾರ್ವತ್ರಿಕ ಗುರುತಿಸುವಿಕೆಯಾಗಲಿದೆ.
ಈ ಹೊಸ ಆವೃತ್ತಿಯು PAN/TAN ಸೇವೆಗಳಿಗೆ ಒಂದೇ ವೇದಿಕೆಯಾಗಲಿದೆ.
ಈ ಯೋಜನೆಯು ಪರಿಸರ ಸ್ನೇಹಿ, ಭದ್ರತೆ ಮತ್ತು ವೇಗವಾಗಿ ಕಾರ್ಯನಿರ್ವಹಿಸಬಲ್ಲ ವ್ಯವಸ್ಥೆಯಾಗಲಿದೆ.
ಪ್ಯಾನ್ 2.0 ಉಪಯೋಗಗಳು
ತೆರಿಗೆದಾರರಿಗೆ ನೋಂದಣಿ ಪ್ರಕ್ರಿಯೆ ವೇಗವಾಗಿ ಮತ್ತು ಬಳಕೆದಾರರ ಸ್ನೇಹಿಯಾಗಿರಲಿದೆ.
ಈಗಾಗಲೇ ಇರುವ ಪ್ಯಾನ್ ಕಾರ್ಡ್ ಅನ್ನು 2.0ಗೆ ಅಪ್‌ಗ್ರೇಡ್ ಮಾಡಿಕೊಳ್ಳಬೇಕು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.
ತೆರಿಗೆದಾರರು, ಉದ್ಯಮಗಳಿಗೆ ಹಣಕಾಸಿನ ವ್ಯವಹಾರವನ್ನು ಸುದಾರಿಸುತ್ತದೆ ಜತೆಗೆ ನಿಖರ ಮಾಹಿತಿಯನ್ನು ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.