ADVERTISEMENT

ಗೋಧಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ ₹150 ಹೆಚ್ಚಳ

ಪಿಟಿಐ
Published 16 ಅಕ್ಟೋಬರ್ 2024, 10:33 IST
Last Updated 16 ಅಕ್ಟೋಬರ್ 2024, 10:33 IST
<div class="paragraphs"><p>ಗೋಧಿ </p></div>

ಗೋಧಿ

   

ನವದೆಹಲಿ: ಕೇಂದ್ರ ಸರ್ಕಾರವು ಬುಧವಾರ 2025–26ನೇ ಮಾರುಕಟ್ಟೆ ವರ್ಷಕ್ಕೆ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ₹150 ಹೆಚ್ಚಿಸಿದೆ. 

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಈ ಕ್ರಮಕೈಗೊಂಡಿದೆ. ಪ್ರತಿ ಕ್ವಿಂಟಲ್‌ ಗೋಧಿಯ ಎಂಎಸ್‌ಪಿ ದರ ₹2,425 ಆಗಿದೆ. 

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಹಿಂಗಾರು ಅವಧಿಯಲ್ಲಿ ವಿವಿಧ ಕೃಷಿ ಹುಟ್ಟುವಳಿಗಳ ಎಂಎಸ್‌ಪಿಯನ್ನು ₹130ರಿಂದ ₹300ಕ್ಕೆ ಹೆಚ್ಚಿಸಿದೆ. 

ದೇಶೀಯವಾಗಿ ಎಣ್ಣೆಕಾಳುಗಳ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾಸಿವೆಗೆ ₹300 ಹೆಚ್ಚಿಸಿದ್ದು, ಪ್ರತಿ ಕ್ವಿಂಟಲ್‌ಗೆ ₹5,950 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. 

ಕುಸುಬೆಗೆ ₹140 ಹೆಚ್ಚಿಸಲಾಗಿದ್ದು, ಪ್ರತಿ ಕ್ವಿಂಟಲ್‌ ದರ ₹5,940 ಆಗಿದೆ. ಚೆನ್ನಂಗಿ ಬೇಳೆಗೆ (ಮಸೂರ್‌ ದಾಲ್) ₹275 ಹೆಚ್ಚಿಸಲಾಗಿದ್ದು, ಕ್ವಿಂಟಲ್‌ಗೆ ಎಂಎಸ್‌ಪಿ ₹6,700 ಆಗಿದೆ. ಕಡಲೆಗೆ ₹210 ಹೆಚ್ಚಿಸಲಾಗಿದ್ದು, ಕ್ವಿಂಟಲ್‌ಗೆ ₹5,650 ಆಗಿದೆ. ಬಾರ್ಲಿಗೆ ₹130 ಹೆಚ್ಚಿಸಿದ್ದು, ಕ್ವಿಂಟಲ್‌ಗೆ ₹1,980 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.