ADVERTISEMENT

ಪಿಎಂ ಸೂರ್ಯ ಘರ್‌ಗೆ ಸಂಪುಟ ಅಸ್ತು: ಪ್ರತಿ ಕುಟುಂಬಕ್ಕೆ ₹78 ಸಾವಿರ ನೆರವು

ಸೌರ ಫಲಕ ಅಳವಡಿಕೆ

ಪಿಟಿಐ
Published 29 ಫೆಬ್ರುವರಿ 2024, 15:35 IST
Last Updated 29 ಫೆಬ್ರುವರಿ 2024, 15:35 IST
<div class="paragraphs"><p> ಸೌರ ಫಲಕ ಅಳವಡಿಸಿರುವುದು</p></div>

ಸೌರ ಫಲಕ ಅಳವಡಿಸಿರುವುದು

   

ನವದೆಹಲಿ: ದೇಶದಲ್ಲಿ ಸೌರ ವಿದ್ಯುತ್ ಬಳಕೆಗೆ ಉತ್ತೇಜನ ನೀಡಲು ಆರಂಭಿಸಿರುವ ₹75,021 ಕೋಟಿ ಮೊತ್ತದ ‘ಪಿಎಂ ಸೂರ್ಯ ಘರ್: ಮುಫ್ತ್‌ ಬಿಜ್ಲಿ ಯೋಜನೆ’ಗೆ ಗುರುವಾರ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.‌

ಸಭೆಯ ಬಳಿಕ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ‘ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಇದರಡಿ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು ತಲಾ 300 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಸುವ ಗುರಿ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಫೆಬ್ರುವರಿ 13ರಂದು ಯೋಜನೆಗೆ ಚಾಲನೆ ನೀಡಲಾಗಿದೆ. ಮನೆಯ ತಾರಸಿ ಮೇಲೆ ಸೌರ ವಿದ್ಯುತ್‌ ಫಲಕ ಅಳವಡಿಸಿಕೊಳ್ಳಲು ಮುಂದಾಗುವ ಪ್ರತಿ ಕುಟುಂಬಕ್ಕೆ ಯೋಜನೆಯಡಿ ಸಬ್ಸಿಡಿ ದೊರೆಯಲಿದೆ.  ‌

2 ಕಿಲೋ ವಾಟ್‌ವರೆಗಿನ ಉಪಕರಣಗಳನ್ನು ಅಳವಡಿಸಿಕೊಳ್ಳುವ ಪ್ರತಿ ಮನೆಯ ಯೋಜನಾ ವೆಚ್ಚದ ಶೇ 60ರಷ್ಟು ಹಣವನ್ನು ಕೇಂದ್ರವೇ ಭರಿಸಲಿದೆ. ಅಲ್ಲದೆ, 2ರಿಂದ 3 ಕಿಲೋ ವಾಟ್‌ ಅಳವಡಿಕೊಳ್ಳಲು ಮುಂದಾಗುವ ಫಲಾನುಭವಿಗಳಿಗೆ ಶೇ 40ರಷ್ಟು ಹಣ ನೀಡಲಿದೆ. 3 ಕಿಲೋ ವಾಟ್‌ವರೆಗಷ್ಟೇ ಆರ್ಥಿಕ ನೆರವು ಸಿಗಲಿದೆ. 

1 ಕಿಲೋ ವಾಟ್‌ಗೆ ₹30 ಸಾವಿರ, 2 ಕಿಲೋ ವಾಟ್‌ಗೆ ₹60 ಸಾವಿರ ಹಾಗೂ 3 ಕಿಲೋ ವಾಟ್‌ ಸಾಮರ್ಥ್ಯದ ಸೌರ ಫಲಕ ಅಳವಡಿಸಿಕೊಂಡರೆ ₹78 ಸಾವಿರ ಸಬ್ಸಿಡಿ ಸಿಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.