ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಸಾಲದ (ಎಂಸಿಎಲ್‌ಆರ್) ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಇದರಿಂದಾಗಿ ವಾಹನಗಳು ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಹೆಚ್ಚಳವಾಗಲಿದೆ.
ಒಂದು ವರ್ಷದ ಎಂಸಿಎಲ್‌ಆರ್ ಬಡ್ಡಿದರವು ಶೇ 8.95ರಿಂದ ಶೇ 9ಕ್ಕೆ ಏರಿಕೆಯಾಗಲಿದೆ ಎಂದು ಬ್ಯಾಂಕ್, ಷೇರುಪೇಟೆಗೆ ಶುಕ್ರವಾರ ತಿಳಿಸಿದೆ.
ಎರಡು ವರ್ಷ ಮತ್ತು ಮೂರು ವರ್ಷದ ಎಂಸಿಎಲ್‌ಆರ್ ಕ್ರಮವಾಗಿ ಶೇ 9.30 ಮತ್ತು ಶೇ 9.40ರಷ್ಟಾಗಿದೆ.
ಒಂದು, ಮೂರು ಮತ್ತು ಆರು ತಿಂಗಳ ಎಂಸಿಎಲ್‌ಆರ್ ಶೇ 8.35ರಿಂದ ಶೇ 8.80ಕ್ಕೆ ಏರಿಕೆಯಾಗಿದೆ. ಈ ಹೊಸ ಬಡ್ಡಿದರವು ಆಗಸ್ಟ್ 12ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.