ADVERTISEMENT

ಕೆನರಾ ಬ್ಯಾಂಕ್‌ನಿಂದ ಹೊಸ ಯೋಜನೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 16:17 IST
Last Updated 4 ಏಪ್ರಿಲ್ 2024, 16:17 IST
ಬೆಂಗಳೂರಿನ ಕೆನರಾ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ಹೊಸ ಯೋಜನೆಗಳಿಗೆ ಚಾಲನೆ ನೀಡಲಾಯಿತು. ರಿಸರ್ವ್‌ ಬ್ಯಾಂಕ್‌ನ ಇನ್ನೋವೇಷನ್ ಹಬ್‌ನ ಸಿಇಒ ರಾಜೇಶ್‌ ಬನ್ಸಾಲ್‌, ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಸತ್ಯನಾರಾಯಣ ರಾಜು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ತನ್ನ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಹೊಸ ಯೋಜನೆಗಳನ್ನು ಪ್ರಕಟಿಸಿದೆ.

ನಗರದಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಆರೋಗ್ಯಕ್ಕೆ ಮೀಸಲಾದ ಕೆನರಾ ಹೀಲ್ ಸಾಲ, ಕೆನರಾ ಏಂಜೆಲ್, ಕ್ಯಾನ್ಸರ್ ಕೇರ್ ಪಾಲಿಸಿ, ವೈಯಕ್ತಿಕ ಸಾಲ, ಕೆನರಾ ರೆಡಿಕ್ಯಾಶ್‌ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು.

ಜೊತೆಗೆ ಬಳಕೆದಾರರಿಗೆ ಕೆನರಾ ಯುಪಿಐ ಸೇವೆ, ಸಿಬ್ಬಂದಿಗೆ ಎಚ್‌ಆರ್‌ಎಂಎಸ್‌ ಮೊಬೈಲ್‌ ಅಪ್ಲಿಕೇಷನ್‌ ಅನ್ನು ಅನಾವರಣಗೊಳಿಸಲಾಯಿತು.

ADVERTISEMENT

ರಿಸರ್ವ್‌ ಬ್ಯಾಂಕ್‌ನ ಇನ್ನೋವೇಷನ್ ಹಬ್‌ನ ಸಿಇಒ ರಾಜೇಶ್‌ ಬನ್ಸಾಲ್‌ ಅವರು ‘ಕೆನರಾ ಎಸ್‌ಎಚ್‌ಜಿ ಇ-ಮನಿ’ ಹೆಸರಿನ ಡಿಜಿಟಲ್ ಎಸ್‌ಎಚ್‌ಜಿ ಯೋಜನೆಗೆ ಚಾಲನೆ ನೀಡಿದರು. ಈ ಕುರಿತ ಪತ್ರವನ್ನು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಸತ್ಯನಾರಾಯಣ ರಾಜು ಅವರೊಂದಿಗೆ ವಿನಿಮಯ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ದೇಬಶಿಶ್‌ ಮುಖರ್ಜಿ, ಅಶೋಕ್‌ ಚಂದ್ರ, ಹರ್ದೀಪ್‌ ಸಿಂಗ್‌ ಅಹ್ಲುವಾಲಿಯಾ, ಭವೇಂದ್ರ ಕುಮಾರ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.