ADVERTISEMENT

ಕೆನರಾ ಬ್ಯಾಂಕ್‌ ‘ಎಕ್ಸ್‌’ ಖಾತೆ ಹ್ಯಾಕ್‌

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:31 IST
Last Updated 23 ಜೂನ್ 2024, 16:31 IST
............
............   

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ ಅಧಿಕೃತ ‘ಎಕ್ಸ್‌’ (ಹಿಂದಿನ ಟ್ಟಿಟರ್‌) ಖಾತೆಯು ಭಾನುವಾರ ಹ್ಯಾಕ್‌ ಆಗಿದೆ.

ಬ್ಯಾಂಕ್‌ನ ತಾಂತ್ರಿಕ ಪರಿಣತರ ತಂಡದಿಂದ ಈ ಕುರಿತು ಪರಿಶೀಲನೆ ನಡೆಯುತ್ತಿದೆ. ಮರು ಸ್ಥಾಪಿಸುವವರೆಗೂ ಗ್ರಾಹಕರು ಬ್ಯಾಂಕ್‌ನ ‘ಎಕ್ಸ್‌’ ಪೇಜ್‌ ಮೇಲೆ ಯಾವುದೇ ಪೋಸ್ಟ್‌ ಮಾಡಬಾರದು ಎಂದು ಕೋರಿದೆ.

ಖಾತೆಯು ಹ್ಯಾಕ್‌ ಆಗಿರುವ ಬಗ್ಗೆ ಬ್ಯಾಂಕ್‌ನ ಎಲ್ಲಾ ಸಿಬ್ಬಂದಿಗೆ ತಿಳಿಸಲಾಗಿದೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ. ‘ಎಕ್ಸ್‌’ನ ತಾಂತ್ರಿಕ ತಂಡದೊಂದಿಗೂ ಸಂಪರ್ಕ ಸಾಧಿಸಿದ್ದು, ಮರಳಿ ಪಡೆಯುವ ಪ್ರಯತ್ನ ನಡೆದಿದೆ ಎಂದು ತಿಳಿಸಿದೆ.

ADVERTISEMENT

ಗ್ರಾಹಕರಿಗೆ ಆಗಿರುವ ತೊಂದರೆಗೆ ವಿಷಾದವಾಗಿದೆ. ಖಾತೆಯು ಮರು ಸ್ಥಾಪನೆಗೊಂಡು ಬ್ಯಾಂಕ್‌ಗೆ ಅಧಿಕೃತವಾಗಿ ಬಳಕೆಗೆ ಲಭಿಸಿದ ನಂತರ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ. 

ಗ್ರಾಹಕರು ಹತ್ತಿರದ ಬ್ಯಾಂಕ್‌ನ ಶಾಖೆ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಮತ್ತು ಸೇವೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.