ದೇಶದಲ್ಲಿ ವಾಹನ ಮಾರಾಟವು ಜುಲೈ ತಿಂಗಳಲ್ಲಿ ಭಾರಿ ಕುಸಿತ ಕಂಡಿದೆ. ಇದು 19 ವರ್ಷದಲ್ಲೇ ಅತ್ಯಧಿಕ ಕುಸಿತ. ವಾಹನ ತಯಾರಿಕೆ ಕಂಪನಿಗಳು ತಯಾರಿಕೆಯನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಿವೆ ಎಂದು ಭಾರತೀಯ ವಾಹನ ತಯಾರಕರ ಸೊಸೈಟಿ (ಎಸ್‌ಐಎಎಂ) ಹೇಳಿದೆ.
ವಾಹನ ತಯಾರಕರ ಬೇಡಿಕೆಗಳು
*ವಾಹನಗಳ ಮೇಲಿನ ಜಿಎಸ್‌ಟಿ ಇಳಿಸಬೇಕು
*ಹಳೆಯ ವಾಹನಗಳ ವಿಲೇವಾರಿ (ಗುಜರಿ) ಯೋಜನೆ ಜಾರಿ
*ವಾಹನಗಳ ಖರೀದಿಗೆ ಸಾಲ ನೀಡುತ್ತಿರುವುದು ಬ್ಯಾಂಕೇತರ ಹಣಕಾಸು ಸಂಸ್ಥೆಗಳೇ ಆಗಿವೆ. ಈ ಕ್ಷೇತ್ರವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ಪರಿಹರಿಸಬೇಕು
ಷೇರು: ₹2.21 ಲಕ್ಷ ಕೋಟಿ ಮಾಯ
ಮುಂಬೈ: ಅಮೆರಿಕ–ಚೀನಾದ ವಾಣಿಜ್ಯ ಸಮರ, ಹಾಂಗ್‌ಕಾಂಗ್‌ನಲ್ಲಿನ ಪ್ರತಿಭಟನೆ, ಅರ್ಜೆಂಟೀನಾ ಕರೆನ್ಸಿ ಕುಸಿತವು ಜಾಗತಿಕ ಮಾರುಕಟ್ಟೆಯಲ್ಲಿ ಸೃಷ್ಟಿಸಿರುವ ಮಾರಾಟದ ಒತ್ತಡವು ದೇಶಿ ಷೇರುಪೇಟೆಯಲ್ಲಿ ಪ್ರತಿಫಲನಗೊಂಡಿತು. ಮಂಗಳವಾರದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು 624 ಅಂಶಗಳ ಕುಸಿತ ಕಂಡಿತು. ಇಂದು ಒಂದು ತಿಂಗಳ ಅವಧಿಯಲ್ಲಿನ ದಿನದ ಗರಿಷ್ಠ ಇಳಿಕೆಯಾಗಿದೆ. ಇದರಿಂದಾಗಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 2.21 ಲಕ್ಷ ಕೋಟಿ ಕರಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.