ನವದೆಹಲಿ: ಯುಟಿಲಿಟಿ ವಾಹನಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ ದೇಶದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಫೆಬ್ರುವರಿಯಲ್ಲಿ ಶೇ 11ರಷ್ಟು ಏರಿಕೆಯಾಗಿದೆ.
ಒಟ್ಟು 3,70,786 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,34,790 ವಾಹನಗಳು ಮಾರಾಟವಾಗಿದ್ದವು ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ತಿಳಿಸಿದೆ.
1.91 ಲಕ್ಷ ಯುಟಿಲಿಟಿ ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 1.38 ಲಕ್ಷ ವಾಹನಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಶೇ 38ರಷ್ಟು ಏರಿಕೆ ಆಗಿದೆ.
ಕಾರುಗಳ ಮಾರಾಟದಲ್ಲಿ ಶೇ 18ರಷ್ಟು ಇಳಿಕೆಯಾಗಿದ್ದು, ಒಟ್ಟು 1.15 ಲಕ್ಷ ಮಾರಾಟವಾಗಿವೆ. ವ್ಯಾನ್‌ಗಳ ಮಾರಾಟ 11,489ರಿಂದ 12,147ಕ್ಕೆ ಏರಿಕೆ ಆಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ 3.7 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದು, ಶೇ 10.8ರಷ್ಟು ಬೆಳವಣಿಗೆ ಆಗಿದೆ ಎಂದು ಎಸ್‌ಐಎಎಂ ನಿರ್ದೇಶಕ ರಾಜೇಶ್ ಮೆನನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.