ADVERTISEMENT

ಕಾಸಾಗ್ರ್ಯಾಂಡ್‌ ಹೇಜೆನ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 14:29 IST
Last Updated 19 ಆಗಸ್ಟ್ 2022, 14:29 IST
ಕಾಸಾಗ್ರ್ಯಾಂಡ್‌ ಹೇಜನ್
ಕಾಸಾಗ್ರ್ಯಾಂಡ್‌ ಹೇಜನ್   

ಬೆಂಗಳೂರು: ‘ಕಾಸಾಗ್ರ್ಯಾಂಡ್‌’ ಕಂಪನಿಯು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಬಳಿ ‘ಕಾಸಾಗ್ರ್ಯಾಂಡ್‌ ಹೇಜೆನ್‌’ ಎನ್ನುವ ಹೊಸ ಯೋಜನೆಯನ್ನು ಆರಂಭಿಸಿದೆ.

9 ಎಕರೆ ಪ್ರದೇಶದಲ್ಲಿ, 1,2,3 ಮತ್ತು 4 ಬಿಎಚ್‌ಕೆ ಹೊಂದಿರುವ 622 ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್‌ ಸಮುಚ್ಛಯ ನಿರ್ಮಿಸಲಾಗಿದೆ. ಪ್ರತಿ ಚದರ ಅಡಿಗೆ ₹ 5,299 ಬೆಲೆ ನಿಗದಿಪಡಿಸಲಾಗಿದೆ.

ವಿಶ್ವದರ್ಜೆಯ 100ಕ್ಕೂ ಅಧಿಕ ಸೌಲಭ್ಯಗಳು ಇಲ್ಲಿವೆ. ವಿಶೇಷವಾಗಿ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಪ್ಲೇ ವಾಕ್‌ ಫನ್‌ ಜೋನ್‌, ರಾಕ್‌ ಕ್ಲೈಂಬಿಗ್‌ ವಾಲ್‌, ಸೈನ್ಸ್‌ ಪಾರ್ಕ್‌ ಸೇರಿದಂತೆ 60ಕ್ಕೂ ಅಧಿಕ ಮನರಂಜನೆ ಮತ್ತು ಆಟದ ಸೌಲಭ್ಯಗಳು ಇಲ್ಲಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಬೇಸ್‌ಮೆಂಟ್‌ ಕಾರ್‌ ಪಾರ್ಕಿಂಗ್‌, ವಾಹನ ಮುಕ್ತ ಪೋಡಿಯಂ ಒಳಗೊಂಡಿದ್ದು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಸುರಕ್ಷಿತವಾಗಿದೆ ಎಂದು ಹೇಳಿದೆ.

ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯು ಬಂಡವಾಳ ಹೂಡಿಕೆಗೆ ಸೂಕ್ತವಾಗಿದೆ. ನಗರವು ಮಂಬರುವ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ಕಾಣಲಿದೆ. ಮನೆ ಖರೀದಿಸುವವರಿಗೆ ಕಾಸಾಗ್ರ್ಯಾಂಡ್ ಹೆಜನ್‌ ಯೋಜನೆಯು ಉತ್ತಮ ಬೆಲೆಗೆ ಐಷಾರಾಮಿ ಮತ್ತು ಆರಾಮದಾಯಕ ಜೀವನಶೈಲಿಯನ್ನು ಕಟ್ಟಿಕೊಡಲಿದೆ ಎಂದು ಕಾಸಾಗ್ರ್ಯಾಂಡ್‌ ಬೆಂಗಳೂರು ವಲಯದ ನಿರ್ದೇಶಕ ಸಿ.ಜಿ. ಸತೀಶ್‌ ಹೇಳಿದ್ದಾರೆ.

ಈ ಯೋಜನೆಯು ಗೊಟ್ಟಿಗೆರೆ ಮೆಟ್ರೊ ನಿಲ್ದಾಣದಿಂದ 5 ನಿಮಿಷ ದೂರದಲ್ಲಿದೆ. ರಾಯಲ್‌ ಮೀನಾಕ್ಷಿ ಮಾಲ್‌ಗೆ 2 ನಿಮಿಷ ದೂರದಲ್ಲಿದೆ. ಯೋಜನೆಯು ಕರ್ನಾಟಕ ರೇರಾ ಅಡಿ ನೋಂದಣಿ ಆಗಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.