ಬೆಂಗಳೂರು: ಮೂಲಸೌಕರ್ಯ ಮತ್ತು ಹಣಕಾಸು ಕ್ಷೇತ್ರದ ಜಾಗತಿಕ ದೈತ್ಯ ಕಂಪನಿ ಕ್ಯಾಟರ್‌ಪಿಲ್ಲರ್ ಇಂಕ್, ಭಾರತದಲ್ಲಿ ತನ್ನ ವಹಿವಾಟಿಗೆ ಚಾಲನೆ ನೀಡಿದೆ.
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ತೆರೆದಿದ್ದು, ಜಿಎಂಎಂ ಮತ್ತು ಗೇನ್‌ವೆಲ್ ಕಾಮೋಸೇಲ್ಸ್ ಕಂಪನಿಗಳ ಸಹಯೋಗದಲ್ಲಿ ಕ್ಯಾಟ್ ಫೈನಾನ್ಶಿಯಲ್ ಸರ್ವೀಸಸ್ ಇಂಡಿಯಾ ಪ್ರೈ.ಲಿ ಅಸ್ತಿತ್ವಕ್ಕೆ ಬಂದಿದೆ.
ಕಂಪನಿ ಉಪಾಧ್ಯಕ್ಷೆ ಶೆಲ್ಲಿ ಬ್ಯಾರೆಟ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಭಾರತವು ಮೂಲಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ದಶಕಗಳಿಂದ ವೇಗವಾಗಿ ಬೆಳೆಯುತ್ತಿದೆ. ಈಕ್ಷೇತ್ರದ ಉದ್ಯಮಿಗಳಿಗೆ ಮತ್ತು ಗ್ರಾಹಕರಿಗೆ ಸಲಹೆ ಮತ್ತು ಹಣಕಾಸು ಸೇವೆ
ನೀಡಲು ಕ್ಯಾಟರ್‌ಪಿಲ್ಲರ್ ಉತ್ಸುಕವಾಗಿದೆ’ ಎಂದು ಅವರು ತಿಳಿಸಿದರು.
ಆರ್ಥಿಕ ಹಿಂಜರಿತ ಕಾಣುತ್ತಿರುವ ಈ ಸಮಯದಲ್ಲಿ ಸಾಲ ನೀಡುವುದು ಲಾಭಕರವೇ ಎಂಬ ಪ್ರಶ್ನೆಗೆ ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕಕ್ಸಿಸ್ಟೋಫರ್ ಲೀ ಫೆರರ್, ‘ಭಾರತ ಸರ್ಕಾರ ಮೂಲಸೌಕರ್ಯ ಕ್ಷೇತ್ರದ ಬೆಳವಣಿಗೆಗೆ ಭಾರತ್‌ಮಾಲಾ, ಸಾಗರ್‌ಮಾಲಾ ಸೇರಿದಂತೆ ಹಲವು ಯೋಜನೆ ಹಮ್ಮಿಕೊಂಡಿದೆ. ಭಾರತದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿರುತ್ತವೆ. ಹೀಗಿರುವಾಗ ಹಣಕಾಸು ಸೇವೆ ಅಗತ್ಯವಾಗಿದೆ’ ಎಂದು ತಿಳಿಸಿದರು.
ಜಿಎಂಎಂ ಕಂಪನಿ ಲಿ. ವ್ಯವಸ್ಥಾಪಕ ನಿರ್ದೇಶಕ ವಿ. ಚಂದ್ರಶೇಖರ್, ಗೇನ್‌ವೆಲ್ ಕಾಮೋಸೇಲ್ಸ್ ಅಧ್ಯಕ್ಷ ಸುನೀಲ್ ಕುಮಾರ್ ಚತುರ್ವೇದಿ, ಕ್ಯಾಟ್ ಇಂಡಿಯಾ ನಿರ್ದೇಶಕ ಬನ್ಸಿ ಪನ್ಸಾಲ್‌ಕರ್ ಸೇರಿದಂತೆ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.