ADVERTISEMENT

ವಿದೇಶಿ ಆದಾಯ ಘೋಷಿಸದ ತೆರಿಗೆದಾರರಿಗೆ ಸಂದೇಶ ರವಾನೆ

ಪಿಟಿಐ
Published 16 ನವೆಂಬರ್ 2024, 13:41 IST
Last Updated 16 ನವೆಂಬರ್ 2024, 13:41 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: 2024–25ನೇ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಿರುವ ಐಟಿಆರ್‌ಗಳಲ್ಲಿ ವಿದೇಶಿ ಆದಾಯ ಅಥವಾ ಸ್ವತ್ತುಗಳ ಬಗ್ಗೆ ಘೋಷಣೆ ಮಾಡದಿರುವ ತೆರಿಗೆದಾರರಿಗೆ ಸಂದೇಶ ರವಾನಿಸಲು ಅಭಿಯಾನ ಆರಂಭಿಸಲಾಗಿದೆ ಎಂದು  ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯಿಂದ ಈ ಅಭಿಯಾನ ನಡೆಯುತ್ತಿದೆ. ವಿದೇಶದಲ್ಲಿ ಇರುವ ಸ್ವತ್ತುಗಳು ಮತ್ತು ಆದಾಯದ ಮೂಲಗಳ ಬಗ್ಗೆ ಐಟಿಆರ್‌ಗಳಲ್ಲಿ ಘೋಷಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈ ಅಭಿಯಾನದಡಿ ಅಗತ್ಯ ನೆರವು ನೀಡುವ ಜೊತೆಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದೆ. 

ADVERTISEMENT

ಈಗಾಗಲೇ, ಐಟಿಆರ್‌ ಸಲ್ಲಿಸಿರುವ ತೆರಿಗೆದಾರರಿಗೆ ಎಸ್ಎಂಎಸ್‌ ಹಾಗೂ ಇ–ಮೇಲ್‌ ಮೂಲಕ ಸಂದೇಶ ರವಾನಿಸಲಾಗುತ್ತಿದೆ ಎಂದು ತಿಳಿಸಿದೆ.

ವಿದೇಶಿ ಖಾತೆಗಳು ಅಥವಾ ಸ್ವತ್ತು ಹೊಂದಿರುವುದು ಅಥವಾ ಆದಾಯ ಪಡೆಯುತ್ತಿರುವ ವ್ಯಕ್ತಿಗಳ ಬಗ್ಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದದ ಅಡಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಇದರ ಆಧಾರದ ಮೇಲೆ ಅಂತಹವರಿಗೆ ಸಂದೇಶ ರವಾನಿಸಲಾಗುತ್ತಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.