ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಕಾರ್ಯಾಚರಣೆಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ₹10,700 ಕೋಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಬುಧವಾರ ಒಪ್ಪಿಗೆ ನೀಡಿದೆ.
ಆಹಾರ ಧಾನ್ಯಗಳ ಖರೀದಿ ಮತ್ತು ಹಂಚಿಕೆಗೆ ನಿಗಮವು, ಕೇಂದ್ರದ ನೋಡಲ್ ಏಜೆನ್ಸಿಯಾಗಿದೆ. ದೇಶದಾದ್ಯಂತ ಕೃಷಿ ವಲಯಕ್ಕೆ ಉತ್ತೇಜನ ನೀಡುವುದು ಹಾಗೂ ರೈತರ ಶ್ರೇಯೋಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ನಿಗಮಕ್ಕೆ ಈ ನೆರವು ನೀಡಲಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ.
1964ರಲ್ಲಿ ₹100 ಕೋಟಿ ಅಧಿಕೃತ ಬಂಡವಾಳದೊಂದಿಗೆ ಎಫ್‌ಸಿಐ ಕಾರ್ಯಾಚರಣೆ ಆರಂಭಿಸಿತು. ಇದರ ಆರಂಭಿಕ ಷೇರಿನ ಮೊತ್ತ ₹4 ಕೋಟಿ ಆಗಿತ್ತು. ಕಳೆದ ವರ್ಷದ ಫೆಬ್ರುವರಿಯಲ್ಲಿ ಇದರ ಅಧಿಕೃತ ಬಂಡವಾಳ ಮೊತ್ತವನ್ನು ಸರ್ಕಾರವು ₹11 ಸಾವಿರ ಕೋಟಿಯಿಂದ ₹21 ಸಾವಿರ ಕೋಟಿಗೆ ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.