ADVERTISEMENT

ವಿಮಾ ವಹಿವಾಟಿಗೆ ಆರ್‌ಬಿಐ ಒಪ್ಪಿಗೆ

ಪಿಟಿಐ
Published 23 ನವೆಂಬರ್ 2024, 13:51 IST
Last Updated 23 ನವೆಂಬರ್ 2024, 13:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಸರ್ಕಾರಿ ಸ್ವಾಮ್ಯದ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ವಿಮಾ ವ್ಯವಹಾರ ಕ್ಷೇತ್ರ ಪ್ರವೇಶಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅನುಮತಿ ನೀಡಿದೆ.

ಫ್ಯೂಚರ್‌ ಜನರಲ್‌ ಇಂಡಿಯಾ ಇನ್ಶೂರೆನ್ಸ್‌ ಕಂಪನಿ (ಎಫ್‌ಜಿಐಐಸಿಎಲ್‌) ಮತ್ತು ಫ್ಯೂಚರ್‌ ಜನರಲ್‌ ಇಂಡಿಯಾ ಲೈಫ್‌ ಇನ್ಶೂರೆನ್ಸ್ ಕಂಪನಿಯ (ಎಫ್‌ಜಿಐಎಲ್‌ಐಸಿಎಲ್‌) ಜಂಟಿ ಸಹಭಾಗಿತ್ವದಡಿ ವಿಮಾ ವಹಿವಾಟು ನಡೆಸಲು ಒಪ್ಪಿಗೆ ನೀಡಿದೆ ಎಂದು ಬ್ಯಾಂಕ್‌, ಷೇರುಪೇಟೆಗೆ ತಿಳಿಸಿದೆ. 

ಎಫ್‌ಜಿಐಐಸಿಎಲ್‌ ಸಾಮಾನ್ಯ ವಿಮೆ, ವಾಣಿಜ್ಯ ವಿಮೆ, ಸಾಮಾಜಿಕ ಹಾಗೂ ಗ್ರಾಮೀಣ ವಿಮಾ ಸೌಲಭ್ಯವನ್ನು ಒದಗಿಸಲಿದೆ. 

ADVERTISEMENT

ಉಳಿತಾಯ ವಿಮೆ, ವಿಶಿಷ್ಟ ವಿಮೆ ಉತ್ಪನ್ನ (ಯುಲಿಪ್‌), ಅವಧಿ ವಿಮೆ, ಆರೋಗ್ಯ ವಿಮೆ, ಮಕ್ಕಳ ವಿಮೆ, ನಿವೃತ್ತಿ ವಿಮೆ, ಗ್ರಾಮೀಣ ಮತ್ತು ಗುಂಪು ವಿಮಾ ಸೌಲಭ್ಯವನ್ನು ಎಫ್‌ಜಿಐಎಲ್‌ಐಸಿಎಲ್‌ ಕಲ್ಪಿಸಲಿದೆ. 

ಈ ಎರಡು ಕಂಪನಿಗಳಿಂದ ಷೇರುಗಳ ಸ್ವಾಧೀನಕ್ಕೆ ಅಕ್ಟೋಬರ್‌ನಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ಬ್ಯಾಂಕ್‌ಗೆ ಒಪ್ಪಿಗೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.