ನವದೆಹಲಿ: ‘ನಾನೂ ಮಧ್ಯಮ ವರ್ಗಕ್ಕೆ ಸೇರಿದವಳು ನನಗೂ ಆ ವರ್ಗದ ಒತ್ತಡದ ಬಗ್ಗೆ ಅರಿವಿದೆ‘ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2023–24ನೇ ಸಾಲಿನ ಕೇಂದ್ರ ಬಜೆಟ್‌ನ ಕುರಿತು ಮಾತನಾಡಿದ ಅವರು, ‘ಮಧ್ಯಮ ವರ್ಗದ ಮೇಲಿರುವ ಒತ್ತಡದ ಬಗ್ಗೆ ನನಗೆ ಅರಿವಿದೆ. ಈವರೆಗೆ ನಮ್ಮ ಸರ್ಕಾರ ಅವರ ಮೇಲೆ ಯಾವುದೇ ತೆರಿಗೆಯ ಹೊರೆ ಹೊರಿಸಿಲ್ಲ. 5 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಇದೆ‘ ಎಂದಿದ್ದಾರೆ.
ಅಲ್ಲದೇ ತಮ್ಮ ಸರ್ಕಾರವು ಮಧ್ಯಮ ವರ್ಗದವರಿಗೆ ಇನ್ನಷ್ಟು ಅನುಕೂಲ ಮಾಡಲು ಸಜ್ಜಾಗಿದೆ ಎನ್ನುವ ಭರವಸೆಯನ್ನೂ ನೀಡಿದ್ದಾರೆ.
‘ಮಧ್ಯಮ ವರ್ಗದ ಜನರ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ಅವರಿಗೆ ಸರ್ಕಾರ ತುಂಬಾ ಅನುಕೂಲಗಳನ್ನು ಮಾಡಿಕೊಟ್ಟಿದೆ. ಅದನ್ನು ಮುಂದುವರಿಸಲಿದೆ‘ ಎಂದು ಹೇಳಿರುವ ಅವರು, ಈ ಬಜೆಟ್‌ನಲ್ಲಿ ಮಾಧ್ಯಮ ವರ್ಗದವರಿಗೆ ಯಾವ ಅನುಕೂಲಗಳು ಸಿಗಲಿದೆ ಎನ್ನುವುದನ್ನು ಹೇಳಿಲ್ಲ.
‘ನಮ್ಮ ಸರ್ಕಾರವು 27 ನಗರಗಳಲ್ಲಿ ಮೆಟ್ರೋ ರೈಲು ಯೋಜನೆಯ ಅಭಿವೃದ್ಧಿಗೆ ಹಲವು ಹೆಜ್ಜೆಗಳನ್ನು ತೆಗೆದುಕೊಂಡಿದೆ. ಜನ ಜೀವನ ಸುಲಭವಾಗಿಸಲು 100 ಸ್ಮಾರ್ಟ್ ಸಿಟಿಯನ್ನು ನಿರ್ಮಾಣ ಮಾಡಲಾಗುತ್ತಿದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.