ನವದೆಹಲಿ: ಕೇಂದ್ರ ಸರ್ಕಾರವು ಈರುಳ್ಳಿ ದಾಸ್ತಾನು ಹೆಚ್ಚಿಸಿಕೊಳ್ಳಲು ಕ್ವಿಂಟಲ್‌ಗೆ ₹2,410 ನೀಡಿ ರೈತರಿಂದ ಈರುಳ್ಳಿ ಖರೀದಿ ಪುನರಾರಂಭಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಈರುಳ್ಳಿ ರಫ್ತಿಗೆ ಶೇ 40ರಷ್ಟು ಸುಂಕ ವಿಧಿಸುವ ತೀರ್ಮಾನವು ಗ್ರಾಹಕರ ಹಿತವನ್ನು ಕಾಯುವ ಉದ್ದೇಶ ಹೊಂದಿದೆ. ಇದೇ ಸಂದರ್ಭದಲ್ಲಿ ಕೇಂದ್ರವು, ಹೆಚ್ಚುವರಿಯಾಗಿ 2 ಲಕ್ಷ ಟನ್ ಈರುಳ್ಳಿಯನ್ನು ರೈತರಿಂದ ಖರೀದಿಸಲು ತೀರ್ಮಾನಿಸಿದೆ ಎಂದು ಅವರು ಹೇಳಿದ್ದಾರೆ.
ಅಗತ್ಯ ಎದುರಾದರೆ ಕೇಂದ್ರವು ರೈತರಿಂದ ಇನ್ನಷ್ಟು ಈರುಳ್ಳಿ ಖರೀದಿಸಿ, ತನ್ನಲ್ಲಿನ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ರಫ್ತು ಮಾಡಿದಾಗ ರೈತರಿಗೆ ಸಾಮಾನ್ಯವಾಗಿ ಕ್ವಿಂಟಲ್‌ಗೆ ₹1,900ರವರೆಗೆ ಸಿಗುತ್ತದೆ. ಆದರೆ ಸರ್ಕಾರವು ₹2,410 ನೀಡಿ ಖರೀದಿಸುತ್ತಿದೆ. ರಫ್ತಿನ ಮೇಲೆ ಸುಂಕ ವಿಧಿಸಿರುವುದರಿಂದ ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ. ಎನ್‌ಸಿಸಿಎಫ್ ಹಾಗೂ ನಾಫೆಡ್ ಸಂಸ್ಥೆಗಳಿಗೆ ರೈತರಿಂದ ಈರುಳ್ಳಿ ಖರೀದಿಸಲು ಸೂಚಿಸಲಾಗಿದೆ ಎಂದು ಗೋಯಲ್ ಹೇಳಿದ್ದಾರೆ. ಈ ಎರಡು ಸಂಸ್ಥೆಗಳು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಈರುಳ್ಳಿ ಖರೀದಿ ಪುನರಾರಂಭಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.