ಚಂಡೀಗಢ: 2024–25ರ ಮುಂಗಾರು ಮಾರುಕಟ್ಟೆ ಋತುವಿನಲ್ಲಿ ಪಂಜಾಬ್‌ನಿಂದ 40 ಲಕ್ಷ ಟನ್ ಅಕ್ಕಿ ಖರೀದಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
‘ಅಕ್ಕಿ ಖರೀದಿ ಮಾಡುವಂತೆ ರಾಜ್ಯದಿಂದ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಡಿಸೆಂಬರ್‌ನೊಳಗೆ ಇಷ್ಟು ಪ್ರಮಾಣದ ಅಕ್ಕಿ ಖರೀದಿ ಮಾಡುವ ಬಗ್ಗೆ ಕೇಂದ್ರವು ಪತ್ರದ ಮೂಲಕ ಲಿಖಿತ ಭರವಸೆ ನೀಡಿದೆ’ ಎಂದು ಪಂಜಾಬ್‌ನ ಆಹಾರ ಇಲಾಖೆಯ ಕಾರ್ಯದರ್ಶಿ ವಿಕಾಸ್ ಗಾರ್ಗ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.