ADVERTISEMENT

ವರ್ಷಾಂತ್ಯದವರೆಗೆ ತೊಗರಿ, ಉದ್ದು ದಾಸ್ತಾನಿಗೆ ಮಿತಿ

ಪಿಟಿಐ
Published 25 ಸೆಪ್ಟೆಂಬರ್ 2023, 16:23 IST
Last Updated 25 ಸೆಪ್ಟೆಂಬರ್ 2023, 16:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ತೊಗರಿ ಮತ್ತು ಉದ್ದಿನ ಬೇಳೆ ದಾಸ್ತಾನು ಮೇಲೆ ಹೇರಿದ್ದ ಮಿತಿಯನ್ನು ಕೇಂದ್ರ ಸರ್ಕಾರವು ಡಿಸೆಂಬರ್‌ 31ರವರೆಗೆ ವಿಸ್ತರಣೆ ಮಾಡಿದೆ. ಈ ಹಿಂದಿನ ಆದೇಶದಲ್ಲಿ ಅಕ್ಟೋಬರ್ 31ರವರೆಗೆ ಮಿತಿ ಹೇರಲಾಗಿತ್ತು.

ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಆದೇಶದ ಪ್ರಕಾರ, ಸಗಟುವ್ಯಾಪಾರಿಗಳು ಮತ್ತು ಬೃಹತ್ ಪ್ರಮಾಣದ ರಿಟೇಲ್ ವರ್ತಕರಿಗೆ ದಾಸ್ತಾನು ಮಿತಿಯನ್ನು 200 ಟನ್‌ಗಳಿಂದ 50 ಟನ್‌ಗಳಿಗೆ ಇಳಿಕೆ ಮಾಡಲಾಗಿದೆ. ರಿಟೇಲ್‌ ವ್ಯಾಪಾರಿಗಳಿಗೆ 5 ಟನ್‌, ಮಿಲ್‌ಗಳಿಗೆ  ಹಿಂದಿನ 1 ತಿಂಗಳ ಉತ್ಪಾದನೆ ಅಥವಾ ವಾರ್ಷಿಕ ಸಾಮರ್ಥ್ಯದ ಶೇ 10ರಷ್ಟು ನಿಗದಿಪಡಿಸಲಾಗಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಜಾಲತಾಣ  https://fcainfoweb.nic.in ನಲ್ಲಿ ದಾಸ್ತಾನು ಮಾಹಿತಿಯನ್ನು ದಾಖಲಿಸುವಂತೆ ಸೂಚನೆ ನೀಡಲಾಗಿದೆ.

ADVERTISEMENT

Graphic text / Statistics - ಬೇಳೆಕಾಳು ಬಿತ್ತನೆ 122 ಲಕ್ಷ ಹೆಕ್ಟೇರ್‌ 2023ರ ಸೆಪ್ಟೆಂಬರ್‌ 22ರವರೆಗೆ 128 ಲಕ್ಷ ಹೆಕ್ಟೇರ್ 2022ರ ಸೆಪ್ಟೆಂಬರ್‌ 22ರವರೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.