ನವದೆಹಲಿ: 2022–23ನೆಯ ಸಾಲಿನಲ್ಲಿ ವಿತ್ತೀಯ ಕೊರತೆಯು ದೇಶದ ಒಟ್ಟು ಜಿಡಿಪಿಯ ಶೇಕಡ 6.4ರಷ್ಟು ಆಗಿದೆ. ಕೇಂದ್ರ ಸರ್ಕಾರದ ಪರಿಷ್ಕೃತ ಬಜೆಟ್ ಅಂದಾಜಿನಲ್ಲಿ ಇದ್ದ ಮಟ್ಟದಲ್ಲಿಯೇ ವಿತ್ತೀಯ ಕೊರತೆ ಇದೆ.
ವಿತ್ತೀಯ ಕೊರತೆಯ ಮೊತ್ತವು ₹17.33 ಲಕ್ಷ ಕೋಟಿ ಎಂದು ಕೇಂದ್ರದ ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ. ವಿತ್ತೀಯ ಕೊರತೆಯನ್ನು ಭರ್ತಿ ಮಾಡಿಕೊಳ್ಳಲು ಕೇಂದ್ರವು ಮಾರುಕಟ್ಟೆಯಿಂದ ಹಣವನ್ನು ಸಾಲವಾಗಿ ತರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.