ADVERTISEMENT

ಪೆಟ್ರೋಲ್‌, ಡೀಸೆಲ್‌ ವಾಹನಗಳಿಗೆ ಸೆಸ್‌ ಸಾಧ್ಯತೆ

ವಿದ್ಯುತ್‌ ಚಾಲಿತ ವಾಹನಗಳಿಗೆ ಸಬ್ಸಿಡಿ ನೀಡುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 0:47 IST
Last Updated 20 ಡಿಸೆಂಬರ್ 2018, 0:47 IST
   

ಬೆಂಗಳೂರು: ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಸಬ್ಸಿಡಿ ನೀಡುವ ಉದ್ದೇಶದಿಂದ ಹೊಸ ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನ ಖರೀದಿಸುವವರಿಗೆ ₹ 500 ರಿಂದ ₹ 25 ಸಾವಿರದವರೆಗೆ ಸೆಸ್‌ ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ಅವರ ನೇತೃತ್ವದ ಕಾರ್ಯದರ್ಶಿಗಳ ಸಮಿತಿ ಸಭೆಯಲ್ಲಿ ಈ ವಿಷಯ ಗುರುವಾರ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧಕರಡು ಯೋಜನೆ ಸಿದ್ಧವಾಗುತ್ತಿದೆ.ಇ–ವಾಹನಗಳಿಗೆ ಸಬ್ಸಿಡಿ ನೀಡಲುಮಾಲಿನ್ಯಕ್ಕೆ ಕಾರಣವಾಗುತ್ತಿರುವ ವಾಹನಗಳಿಗೆ ಸೆಸ್‌ ವಿಧಿಸಬೇಕು ಎಂದುನೀತಿ ಆಯೋಗ ಶಿಫಾರಸು ಮಾಡಿದೆ.

ADVERTISEMENT

ವಿದ್ಯುತ್‌ ಚಾಲಿತ ವಾಹನ ಖರೀದಿಸುವ ಗ್ರಾಹಕರಿಗೆ ನೇರವಾಗಿ ಸಬ್ಸಿಡಿ ಮೊತ್ತ ವರ್ಗಾಯಿಸುವ ಪ್ರಸ್ತಾವನೆಯನ್ನೂ ನೀತಿ ಆಯೋಗ ಮುಂದಿಟ್ಟಿದೆ. ಸಬ್ಸಿಡಿ ಮೊತ್ತ ₹ 25 ಸಾವಿರದಿಂದ ₹ 50 ಸಾವಿರದವರೆಗಿದೆ.

ಸೆಸ್‌ನಿಂದ ಮೊದಲ ವರ್ಷ ಸರ್ಕಾರದ ಬೊಕ್ಕಸಕ್ಕೆ ₹ 7,646 ಕೋಟಿ ವರಮಾನ ಬರುವ ನಿರೀಕ್ಷೆ ಮಾಡಲಾಗಿದೆ.

ಅಸಮಾಧಾನ: ಯೋಜನಾ ಆಯೋಗದ ಶಿಫಾರಸಿಗೆ ವಾಹನ ಉದ್ಯಮ ಅಸಮಾಧಾನ ವ್ಯಕ್ತಪಡಿಸಿದೆ. ‘ಭಾರತದಂತಹ ದೇಶಗಳಲ್ಲಿ ಬಹುತೇಕ ಪ್ರಯಾಣಿಕ ವಾಹನಗಳು ಸಣ್ಣ ಕಾರುಗಳಾಗಿವೆ. ಸಬ್ಸಿಡಿ ನೀಡುವ ಮೂಲಕ ಸಣ್ಣ ಕಾರುಗಳನ್ನು ಖರೀದಿಸುವವರನ್ನು ಇ–ವಾಹನದೆಡೆಗೆ ಆಕರ್ಷಿತರಾಗಲಿದ್ದಾರೆ ಎನ್ನುವುದು ಸರಿಯಲ್ಲ’ ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌.ಸಿ. ಭಾರ್ಗವ
ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.