ADVERTISEMENT

ಆರ್ಥಿಕ ಬೆಳವಣಿಗೆ ಸಂಸ್ಥೆಯ ಅಧ್ಯಕ್ಷರಾಗಿ ಎನ್‌.ಕೆ. ಸಿಂಗ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 9:30 IST
Last Updated 19 ಆಗಸ್ಟ್ 2021, 9:30 IST
ಎನ್‌.ಕೆ.ಸಿಂಗ್‌
ಎನ್‌.ಕೆ.ಸಿಂಗ್‌   

ನವದೆಹಲಿ: 15ನೇ ಹಣಕಾಸು ಆಯೋಗದ ಮುಖ್ಯಸ್ಥ ಎನ್‌.ಕೆ.ಸಿಂಗ್‌ ಅವರು ಆರ್ಥಿಕ ಬೆಳವಣಿಗೆ ಸಂಸ್ಥೆಯ‌ (ಐಇಜಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಗಸ್ಟ್‌ 16ರಂದು ನಡೆದ ಸಾಮಾನ್ಯ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಸಂಸ್ಥೆಯು ಗುರುವಾರ ತಿಳಿಸಿದೆ.

ಸಂಸ್ಥೆಯ ಅಧ್ಯಕ್ಷರಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವರು ಎನ್‌.ಕೆ.ಸಿಂಗ್‌ ಅವರ ಹೆಸರನ್ನು ಸಾಮಾನ್ಯ ಮಂಡಳಿ ಸಭೆಯಲ್ಲಿ ಶಿಫಾರಸು ಮಾಡಿದ್ದರು ಎಂದು ಐಇಜಿ ಪ್ರಕಟಣೆ ಹೊರಡಿಸಿದೆ. ದೇಶದ ಮಾಜಿ ಪ್ರಧಾನಿಯೂ ಆಗಿರುವ ಮನಮೋಹನ್‌ ಸಿಂಗ್‌ ಅವರು 1992 ರಿಂದಲೂ ಐಇಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮನಮೋಹನ್‌ ಸಿಂಗ್ ಇದೇ ತಿಂಗಳ ಆರಂಭದಲ್ಲಿ ನಿವೃತ್ತರಾಗಿದ್ದರು. ಅವರ ಉತ್ತರಾಧಿಕಾರಿಯಾಗಿ ಎನ್‌.ಕೆ.ಸಿಂಗ್‌ ಮುಂದುವರಿಯಲಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮಾಜಿ ಮಹಾ‌ ನಿರ್ದೇಶಕರ ಮತ್ತು ಸದ್ಯ ಆಡಳಿತ ಮಂಡಳಿ ಮುಖ್ಯಸ್ಥರಾಗಿರುವ ತರುಣ್‌ ದಾಸ್‌ ಮತ್ತು ಪ್ರೊ. ಅಜಿತ್‌ ಮಿಶ್ರಾ ಅವರು ಐಇಜಿಯ ನಿರ್ದೇಶಕರಾಗಿರಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.