ಬೆಂಗಳೂರು: ಇಸ್ರೇಲ್ ಮೂಲದ ಹಾಗೂ ಸೈಬರ್ ಸೆಕ್ಯೂರಿಟಿಯಲ್ಲಿ ಮುಂಚೂಣಿಯಲ್ಲಿರುವ ಚೆಕ್ ಪಾಯಿಂಟ್ ಸಾಫ್ಟ್‌ವೇರ್ (Check Point Software Technologies) ಕಂಪನಿ ಬೆಂಗಳೂರಿನಲ್ಲಿ ಕಚೇರಿಯನ್ನು ಆರಂಭಿಸುತ್ತಿದೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ಇಸ್ರೇಲ್‌ನ ಟೆಲ್ ಅವಿವ್ ಹೊರತುಪಡಿಸಿ ಬೆಂಗಳೂರಿನಲ್ಲಿ ತೆರೆಯುತ್ತಿರುವುದು ನಮ್ಮ ಅತಿದೊಡ್ಡ ಕಚೇರಿಯಾಗಿದೆ’ ಎಂದು ಹೇಳಿದೆ.
ಹೊಸ ಕಚೇರಿಯು ಎಐ ಡೆಮೊ ಕೇಂದ್ರ ಹಾಗೂ ಗ್ರಾಹಕ ಅನುಭವ ಕೇಂದ್ರ ಹೊಂದಿದೆ. ಇಲ್ಲಿ ಗ್ರಾಹಕರು ತಮ್ಮ ಉದ್ಯಮಗಳ ಬೆಳವಣಿಗೆಗೆ ಅತ್ಯಾಧುನಿಕ ಭದ್ರತಾ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದೆ.
ಜಾಗತಿಕವಾಗಿ ಸುಮಾರು 6 ಸಾವಿರ ನೌಕರರನ್ನು ಹೊಂದಿರುವ ಕಂಪನಿ ಜೂನ್‌ನಲ್ಲಿ ಬೆಂಗಳೂರು ಕಚೇರಿಯನ್ನು ಉದ್ಘಾಟಿಸಲಿದೆ. ಅಲ್ಲದೇ ದೆಹಲಿ, ಚೆನ್ನೈ ಮತ್ತು ಮುಂಬೈನಲ್ಲೂ ಭಾರತದ ಶಾಖೆಗಳನ್ನು ಹೊಂದಲಿದೆ ಎಂದು ಚೆಕ್ ಪಾಯಿಂಟ್ ಸಾಫ್ಟ್‌ವೇರ್‌ನ ಭಾರತದ ಮುಖ್ಯಸ್ಥ ಸುಂದರ್ ಸುಬ್ರಮಣಿಯನ್ ತಿಳಿಸಿದ್ದಾರೆ.
ಚೆಕ್ ಪಾಯಿಂಟ್ ಅಮೆರಿಕ ಸಹಯೋಗದ ಒಂದು ಜಾಗತಿಕ ಸಾಫ್ಟ್‌ವೇರ್ ಕಂಪನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.