ಕೆರೂರ(ಬಾಗಲಕೋಟೆ): ಹಸಿ ಮೆಣಸಿನಕಾಯಿ(ಗಿಡ್ಡ) ದರ ಗಗನಕ್ಕೇರುತ್ತಿದ್ದು, ಮಂಗಳವಾರ ನಡೆಯುವ ಇಲ್ಲಿನ ಸಂತೆಯಲ್ಲಿ ಕೆ.ಜಿ.ಗೆ ₹240ಕ್ಕೆ ಮಾರಾಟವಾಯಿತು. ಬೆಲೆ ಕೇಳಿ ಹೌಹಾರಿದ ಗ್ರಾಹಕರು, ಮಾರಾಟಗಾರರೊಂದಿಗೆ ಚೌಕಾಶಿ ನಡೆಸಿ, ಕೊನೆಗೆ ಉದ್ದ ಮೆಣಸಿನಕಾಯಿ (ದರ ₹100 ಕೆ.ಜಿ) ಖರೀದಿಸಿದರು.
ಆವಕ ಕ್ಷೀಣ: ‘ಮುಂಗಾರು ಹಂಗಾಮಿನಲ್ಲಿ ರೈತರು ಹಸಿ ಮೆಣಸಿನಕಾಯಿ ಬೆಳೆದರೆ, ಹಿಂಗಾರಿನಲ್ಲಿ ಬೆಳೆದ ಬ್ಯಾಡಗಿ ತಳಿಯ ಮೆಣಸಿನಕಾಯಿಯನ್ನು ಒಣಗಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಈ ಭಾಗದ ಬಹುಪಾಲು ಕೃಷಿಕರು ಕಬ್ಬು ಬೆಳೆಗೆ ಒತ್ತು ನೀಡಿದ್ದಾರೆ. ಹೀಗಾಗಿ ಹಸಿ ಮೆಣಸಿನಕಾಯಿಯ ಆವಕ ಕ್ಷೀಣಿಸಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ದಿನ ಕಳೆದಂತೆ ಬೆಲೆ ಹೆಚ್ಚುತ್ತಲೇ ಇದೆ’ ಎನ್ನುತ್ತಾರೆ ರೈತ ಹಾಗೂ ವರ್ತಕ ಮಲ್ಲಿಕಾರ್ಜುನ ಪೂಜಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.