ADVERTISEMENT

ಚೀನಾದಲ್ಲಿ ಮೊಬೈಲ್ ಚಿಪ್‌ ವಿನ್ಯಾಸ ಘಟಕ ಮುಚ್ಚಲಿರುವ ಒಪ್ಪೊ

ರಾಯಿಟರ್ಸ್
Published 13 ಮೇ 2023, 11:10 IST
Last Updated 13 ಮೇ 2023, 11:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಂಘೈ (ರಾಯಿಟರ್ಸ್‌): ಸ್ಮಾರ್ಟ್‌ಫೋನ್‌ ತಯಾರಿಸುವ ಚೀನಾದ ಒಪ್ಪೊ ಕಂಪನಿಯು ಚಿಪ್‌ ವಿನ್ಯಾಸ ಮಾಡುವ ಘಟಕವನ್ನು ಮುಚ್ಚುವುದಾಗಿ ಹೇಳಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಮತ್ತು ಸ್ಮಾರ್ಟ್‌ಫೋನ್‌ ಮಾರಾಟ ಇಳಿಕೆ ಆಗಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಕಂಪನಿ ತಿಳಿಸಿದೆ.

ಚೀನಾದಲ್ಲಿ ಹೆಚ್ಚು ಮಾರಾಟ ಕಾಣುವ ದೇಶಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿರುವ ಒಪ್ಪೊ, 2019ರಲ್ಲಿ ಸ್ಥಾಪಿಸಿರುವ ಜೆಕು ಘಟಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊ ಮತ್ತು ಫೊಟೊಗ್ರಫಿ ಗುಣಮಟ್ಟ ಸುಧಾರಣೆಗೆ ಬಳಸುವ ಮಾರಿಸಿಲಿಕಾನ್ ಎಕ್ಸ್‌ ಚಿಪ್‌ ತಯಾರಿಕೆಯನ್ನು ಸಹ ನಿಲ್ಲಿಸುವುದಾಗಿ ತಿಳಿಸಿದೆ.

ಜಾಗತಿಕ ಆರ್ಥಿಕತೆ ಮತ್ತು ಸ್ಮಾರ್ಟ್‌ಫೋನ್‌ ಉದ್ಯಮದ ಕುರಿತು ಎದುರಾಗಿರುವ ಅನಿಶ್ಚಿತತೆಯಿಂದಾಗಿ ಕಂಪನಿಯ ದೀರ್ಘಾವಧಿಯ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಕಠಿಣವಾದ ಹೊಂದಾಣಿಕೆ ಮಾಡಿಕೊಳ್ಳುವಂತಾಗಿದೆ ಎಂದು ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.