ADVERTISEMENT

₹773 ಕೋಟಿ ತೆರಿಗೆ ಬಾಕಿ: ಔಷಧಗಳ ತಯಾರಿಕಾ ಕಂಪನಿ ಸಿಪ್ಲಾಗೆ ನೋಟಿಸ್‌

ಪಿಟಿಐ
Published 16 ಜುಲೈ 2024, 13:49 IST
Last Updated 16 ಜುಲೈ 2024, 13:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2015–16ರಿಂದ 2022–23ನೇ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ಒಟ್ಟು ₹773 ಕೋಟಿ ತೆರಿಗೆ ಪಾವತಿಸುವಂತೆ ಔಷಧಗಳ ತಯಾರಿಕಾ ಕಂಪನಿ ಸಿಪ್ಲಾಗೆ, ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.

‘ಈ ವರ್ಷಗಳಿಗೆ ಸಂಬಂಧಿಸಿ ಕಂಪನಿಯು ಕೆಲವು ವೆಚ್ಚಗಳ ಬಗ್ಗೆ ದಾಖಲೆ ಸಲ್ಲಿಸಿತ್ತು. ಇದಕ್ಕೆ ತೆರಿಗೆ ಇಲಾಖೆಯು ಅನುಮತಿ ನೀಡಿಲ್ಲ. ಮೌಲ್ಯಮಾಪನ ಮತ್ತು ಮರುಮೌಲ್ಯಮಾಪನ ನಡೆಸಿದ ಬಳಿಕ ತೆರಿಗೆ ಪಾವತಿಸುವಂತೆ ಆದೇಶ ನೀಡಿದೆ. ಇದು ಮರುಪಾವತಿ (ರೀಫಂಡ್‌) ಮೊತ್ತವನ್ನು ಒಳಗೊಂಡಿಲ್ಲ’ ಎಂದು ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.

ಇಲಾಖೆಯ ತೆರಿಗೆ ಬೇಡಿಕೆಯು ಕಾನೂನಿನಡಿ ಸಮರ್ಥನೀಯವಾಗಿಲ್ಲ ಎಂಬುದು ನಮ್ಮ ನಂಬಿಕೆಯಾಗಿದೆ. ಈ ನೋಟಿಸ್‌ ಕಂಪನಿಯ ಹಣಕಾಸು ಅಥವಾ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕುರಿತು ಕಾನೂನು ಚೌಕಟ್ಟಿನಡಿ ಪ್ರಶ್ನಿಸಲಾಗುವುದು ಎಂದು ತಿಳಿಸಿದೆ. 

ADVERTISEMENT

ಮಂಗಳವಾರ ಬಿಎಸ್‌ಇಯಲ್ಲಿ ಕಂಪನಿಯ ಷೇರಿನ ಮೌಲ್ಯ ಶೇ 0.56ರಷ್ಟು ಇಳಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ ₹1,507 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.