ADVERTISEMENT

ದೇಶದ ಮೊದಲ ಸಿಎನ್‌ಜಿ ಬೈಕ್‌ ಬಿಡುಗಡೆ ಮಾಡಿದ ಬಜಾಜ್‌ ಆಟೊ ಕಂಪನಿ

ಪಿಟಿಐ
Published 9 ಅಕ್ಟೋಬರ್ 2024, 14:42 IST
Last Updated 9 ಅಕ್ಟೋಬರ್ 2024, 14:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚಂಡೀಗಢ: ಬಜಾಜ್‌ ಆಟೊ ಕಂಪನಿಯು ದೇಶದ ಮೊದಲ ಸಿಎನ್‌ಜಿ ಫ್ರೀಡಂ 125 ಬೈಕ್‌ ಅನ್ನು ಬುಧವಾರ ಮಾರುಕಟ್ಟೆಗೆ ಪರಿಚಯಿಸಿದೆ.

ಬಿಡುಗಡೆಯ ದಿನವೇ 16 ಗ್ರಾಹಕರಿಗೆ ಬೈಕ್‌ ವಿತರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಬೈಕ್‌ನಲ್ಲಿ ಸಿಎನ್‌ಜಿ ಮತ್ತು ಪೆಟ್ರೋಲ್‌ ಟ್ಯಾಂಕ್‌ ಎರಡೂ ಇರಲಿವೆ. ಪೆಟ್ರೋಲ್‌ ಬಳಸುವ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ, ಸಿಎನ್‌ಜಿ ಬೈಕ್‌ನ ಬಳಕೆಯಿಂದ ಶೇ 50ರಷ್ಟು ಇಂಧನ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ. 2 ಕೆ.ಜಿ ಸಿಎನ್‌ಜಿ ಇಂಧನದಲ್ಲಿ 200 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದೆ.

ADVERTISEMENT

ಸಿಎನ್‌ಜಿ ಇಂಧನ ಖಾಲಿಯಾದರೆ ಇದರ ಜೊತೆಗಿರುವ 2 ಲೀಟರ್‌ ಸಾಮರ್ಥ್ಯದ ಪೆಟ್ರೋಲ್‌ನಿಂದ 130 ಕಿ.ಮೀ ದೂರ ಪ್ರಯಾಣಿಸಬಹುದಾಗಿದೆ ಎಂದು ಹೇಳಿದೆ.

ಬೈಕ್‌ ಅನಾವರಣಗೊಳಿಸಿದ ಚಂಡೀಗಢದ ಪರಿಸರ ಇಲಾಖೆಯ ನಿರ್ದೇಶಕ ಟಿ.ಸಿ. ನೌಟಿಯಾಲ್ ಮಾತನಾಡಿ, ‘ಸಿಎ‌ನ್‌ಜಿ ಬೈಕ್‌ ಬಳಕೆಯಿಂದ ವಾಯುಮಾಲಿನ್ಯ ಪ್ರಮಾಣ ತಗ್ಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.