ADVERTISEMENT

ದರ ನಿಗದಿ ಸೂತ್ರ ಪರಿಷ್ಕರಣೆ: ಶೇ 10ರಷ್ಟು ಇಳಿಕೆಯಾಗಲಿದೆ ಸಿಎನ್‌ಜಿ, ಪಿಎನ್‌ಜಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 3:08 IST
Last Updated 7 ಏಪ್ರಿಲ್ 2023, 3:08 IST
   

ನವದೆಹಲಿ: ಗೃಹಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಲಿದೆ.

ಈ ಇಂಧನಗಳ ದರ ನಿಗದಿ ಸೂತ್ರ ಬದಲಾವಣೆಗೆ ಹಾಗೂ ದರ ನಿಗದಿಗೆ ಮಿತಿ ನಿಗದಿಪಡಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಇದರ ಪರಿಣಾಮವಾಗಿ ದರ ಇಳಿಕೆಯಾಗಲಿದೆ.

ಹೊಸ ಸೂತ್ರದಂತೆ ಈ ಇಂಧನಗಳ ದರವನ್ನು ಈಗಿನಂತೆ ದ್ವೈವಾರ್ಷಿಕದ ಬದಲಿಗೆ ಪ್ರತಿ ತಿಂಗಳು ಪರಿಷ್ಕರಣೆ ಮಾಡ
ಲಾಗುತ್ತದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್‌ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.