ನವದೆಹಲಿ: ಮುಂಬೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರವನ್ನು ಅನಿಲ ಸಂಸ್ಥೆಗಳು ಪ್ರತಿ ಕೆ.ಜಿಗೆ ₹2 ಹೆಚ್ಚಿಸಿವೆ.
ಆದರೆ, ಶೀಘ್ರದಲ್ಲೇ ದೆಹಲಿಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಇಲ್ಲಿ ಬೆಲೆ ಏರಿಕೆ ಮಾಡಿಲ್ಲ. ಚುನಾವಣೆ ನಂತರ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್, ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಸೇರಿ ಹಲವು ಕಂಪನಿಗಳು ಸಿಎನ್‌ಜಿ ದರ ₹2 ಏರಿಕೆ ಮಾಡಿವೆ. ಬೆಲೆ ಹೆಚ್ಚಳದಿಂದ ಮುಂಬೈನಲ್ಲಿ ಪ್ರತಿ ಕೆ.ಜಿ ಸಿಎನ್‌ಜಿ ದರ ₹77 ಆಗಿದೆ. ದೆಹಲಿಯಲ್ಲಿ ₹75.09 ಇದೆ.
ಮಹಾನಗರ ಗ್ಯಾಸ್ ಲಿಮಿಟೆಡ್, ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಸೇರಿ ಹಲವು ಕಂಪನಿಗಳ ತಯಾರಿಕಾ ವೆಚ್ಚ ಶೇ 20ರಷ್ಟು ಏರಿಕೆಯಾಗಿದ್ದರೂ, ಎರಡು ತಿಂಗಳಿಂದ ಬೆಲೆ ಏರಿಕೆ ಮಾಡಿದ್ದಿಲ್ಲ. ಇದೀಗ ಮಹಾರಾಷ್ಟ್ರದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆಯೇ ಕಂಪನಿಗಳು ದರ ಏರಿಕೆ ಮಾಡಿವೆ.
ಸಿಎನ್‌ಜಿ ದರ, ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆಗಳ ಮೇಲೆ ಅವಲಂಬಿಸಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.