ADVERTISEMENT

ಕೋಲ್ ಇಂಡಿಯಾ ಲಾಭ ಶೇ 17ರಷ್ಟು ಇಳಿಕೆ

ಪಿಟಿಐ
Published 7 ಮೇ 2023, 16:07 IST
Last Updated 7 ಮೇ 2023, 16:07 IST

ನವದೆಹಲಿ (ಪಿಟಿಐ): ನೌಕರರ ವೇತನ ಪರಿಷ್ಕರಣೆಗೆ ಹೆಚ್ಚಿನ ಮೊತ್ತವನ್ನು ತೆಗೆದಿರಿಸಿರುವ ಕಾರಣ, ಕೋಲ್ ಇಂಡಿಯಾ ಕಂಪನಿಯ ಮಾರ್ಚ್ ತ್ರೈಮಾಸಿಕದ ಲಾಭವು ಶೇಕಡ 17.7ರಷ್ಟು ಕಡಿಮೆ ಆಗಿದೆ.

ಕಂಪನಿಯ ನಿವ್ವಳ ಲಾಭವು ₹5,527 ಕೋಟಿ ಆಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದ ಅವಧಿಯಲ್ಲಿ ಕಂಪನಿಯು ₹6,715 ಕೋಟಿ ಲಾಭ ಗಳಿಸಿತ್ತು.

ಮಾರ್ಚ್ ತ್ರೈಮಾಸಿಕದಲ್ಲಿ ಕಲ್ಲಿದ್ದಲು ಉತ್ಪಾದನೆಯು ಶೇ 7ರಷ್ಟು ಹೆಚ್ಚಾಗಿದೆ. ಕಂಪನಿಯು ಷೇರುದಾರರಿಗೆ ಪ್ರತಿ ಷೇರಿಗೆ ₹4ರ ಅಂತಿಮ ಲಾಭಾಂಶ ಘೋಷಿಸಿದೆ. ಈ ಹಿಂದೆ ಕಂಪನಿಯು ಪ್ರತಿ ಷೇರಿಗೆ ₹15ರಷ್ಟು ಮತ್ತು ₹5.25ರಷ್ಟು ಮಧ್ಯಂತರ ಲಾಭಾಂಶ ಪ್ರಕಟಿಸಿತ್ತು.

ADVERTISEMENT

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.