ಕೋಲ್ಕತ್ತ: ಕೋವಿಡ್–19ಗೆ ಸಂಬಂಧಿಸಿದ ಬಿಕ್ಕಟ್ಟಿನಿಂದಾಗಿ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಕಂಪನಿಯು ಪ್ರಸಕ್ತ ಹಣಕಾಸು ವರ್ಷಕ್ಕೆ ಹಾಕಿಕೊಂಡಿದ್ದ ಉತ್ಪಾದನೆಯ ಗುರಿಯನ್ನು ತಗ್ಗಿಸಿದೆ.
2020–21ನೇ ಹಣಕಾಸು ವರ್ಷದಲ್ಲಿ 71 ಕೋಟಿ ಟನ್ ಉತ್ಪಾದನೆ ಮಾಡುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಅದನ್ನು 65–66 ಕೋಟಿ ಟನ್‌ಗಳಿಗೆ ಇಳಿಕೆ ಮಾಡಿರುವುದಾಗಿ ಕಂಪನಿಯು ಅಧ್ಯಕ್ಷ ಪ್ರಮೋದ್ ಅಗರ್ವಾಲ್ ತಿಳಿಸಿದ್ದಾರೆ.
ಭಾರತ್ ಛೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಿಸಲು ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಕಲ್ಲಿದ್ದಲು ಬೇಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಆದರೆ, ಇದೀಗ ಕೈಗಾರಿಕೆಗಳು ಮತ್ತೆ ಚಟುವಟಿಕೆ ಆರಂಭಿಸಿರುವುದರಿಂದ ಬೇಡಿಕೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಪರಿಸ್ಥಿತಿಯನ್ನು ಪರಿಗಣಿಸಿ ಉತ್ಪಾದನೆಯ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಶೇ 7–8ರಷ್ಟು ಬೇಡಿಕೆ ಬರುವ ಅಂದಾಜು ಮಾಡಲಾಗಿದೆ.
ಹಿಂದಿನ ಹಣಕಾಸು ವರ್ಷದಲ್ಲಿ 63 ಕೋಟಿ ಟನ್ ಉತ್ಪಾದನೆಯ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಉತ್ಪಾದನೆ ಆಗಿದ್ದು ಮಾತ್ರ 60 ಕೋಟಿ ಟನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.