ADVERTISEMENT

ವಾಣಿಜ್ಯ ಕಲ್ಲಿದ್ದಲು ಉತ್ಪಾದನೆ ಶೇ 27ರಷ್ಟು ಏರಿಕೆ

ಪಿಟಿಐ
Published 2 ಮಾರ್ಚ್ 2024, 16:02 IST
Last Updated 2 ಮಾರ್ಚ್ 2024, 16:02 IST
<div class="paragraphs"><p>ಕಲ್ಲಿದ್ದಲು </p></div>

ಕಲ್ಲಿದ್ದಲು

   

ನವದೆಹಲಿ: 2023–24ರ ಹಣಕಾಸು ವರ್ಷದ ಏಪ್ರಿಲ್-ಫೆಬ್ರುವರಿ ಅವಧಿಯಲ್ಲಿ ಗಣಿಗಳಿಂದ 12.68 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದನೆ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 27.06ರಷ್ಟು ಏರಿಕೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಹನ್ನೊಂದು ತಿಂಗಳಲ್ಲಿ ಗಣಿಗಳಿಂದ ಕಲ್ಲಿದ್ದಲು ಸಾಗಣೆಯು 12.88 ಕೋಟಿ ಟನ್‌ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 29.14ರಷ್ಟು ಏರಿಕೆಯಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.

ADVERTISEMENT

ಫೆಬ್ರುವರಿಯಲ್ಲಿ ಒಟ್ಟು ಕಲ್ಲಿದ್ದಲು ಉತ್ಪಾದನೆ ಮತ್ತು ಸಾಗಣೆಯು 1.48 ಕೋಟಿ ಟನ್ ಮತ್ತು 1.29 ಕೋಟಿ ಟನ್ ಆಗಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕ್ರಮವಾಗಿ ಶೇ 37 ಮತ್ತು ಶೇ 33ರಷ್ಟು ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.