ADVERTISEMENT

ತಮಿಳುನಾಡಿನಿಂದ ಹೆಚ್ಚಿದ ಆಮದು: ರಾಜ್ಯದಲ್ಲಿ ತೆಂಗಿನ ಕಾಯಿ ಬೆಲೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:31 IST
Last Updated 10 ಜೂನ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಕೊಬ್ಬರಿ ಬೆಲೆ ಇಳಿಕೆಯತ್ತ ಮುಖ ಮಾಡಿದಂತೆ, ತೆಂಗಿನ ಕಾಯಿ ಧಾರಣೆಯೂ ತೀವ್ರವಾಗಿ ಕುಸಿತ ಕಂಡಿದೆ.

ಒಂದು ಸಾವಿರ ತೆಂಗಿನ ಕಾಯಿ ಬೆಲೆ ₹15 ಸಾವಿರದಿಂದ ₹18 ಸಾವಿರ ಇತ್ತು. ಪ್ರಸ್ತುತ ಒಂದು ಸಾವಿರ ಕಾಯಿ ಬೆಲೆ ₹8 ಸಾವಿರದಿಂದ ₹10 ಸಾವಿರಕ್ಕೆ ಇಳಿಕೆಯಾಗಿದೆ. ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹13 ಸಾವಿರದಿಂದ ₹14 ಸಾವಿರಕ್ಕೆ ಕುಸಿದಿದೆ. ಒಂದು ತಿಂಗಳ ಹಿಂದೆ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹18 ಸಾವಿರದ ವರೆಗೂ ಏರಿಕೆಯಾಗಿತ್ತು.

ಬೆಂಗಳೂರು ಮಾರುಕಟ್ಟೆಗೆ ತಮಿಳುನಾಡಿನಿಂದ ತೆಂಗಿನ ಕಾಯಿ ಬರುತ್ತಿದ್ದು, ರಾಜ್ಯದ ಕಾಯಿಗೆ ಬೇಡಿಕೆ ಕಡಿಮೆಯಾಗಿದೆ.

ADVERTISEMENT

‘ಕಳೆದ ಎರಡು ವಾರಗಳಿಂದ ಬೆಲೆ ತೀವ್ರವಾಗಿ ಕುಸಿತ ಕಂಡಿದೆ. ಮುಂದಿನ ಕೆಲ ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ’ ಎಂದು ವರ್ತಕ ಕೆಸ್ತೂರು ವೀರಣ್ಣ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.